Bun tea: ಸೆಪ್ಟೆಂಬರ್ 22ಕ್ಕೆ ಬನ್ ಟೀ ಸಿನಿಮಾ ತೆರೆಗೆ

ಹೊಸಬರೇ ನಟಿಸಿರುವ ಚಿತ್ರ ಬನ್ ಟೀ ಸೆಪ್ಟೆಂಬರ್ 22ರಂದು ಬಿಡುಗಡೆಯಾಗಲಿದೆ.

ಕಾರ್ಮೋಡ ಸರಿದು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಸಂಕಲನಕಾರ, ನಿರ್ದೇಶಕ ಉದಯ್ ಕುಮಾರ್ ಅವರು ಈ ಚಿತ್ರದ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಚಿತ್ರದಲ್ಲಿ ಬಹುತೇಕರು ಹೊಸಬರೇ ಆಗಿದ್ದು ಕೆಲವರು ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾದಿಂದ ತರಬೇತಿ ಪಡೆದಿದ್ದಾರೆ.

ಈ ಚಿತ್ರವು ನಿಜ ಜೀವನದ ಘಟನೆ ಯಿಂದ ಸ್ಪೂರ್ತಿ ಪಡೆದಿದೆ. ಶಿಕ್ಷಣ ವ್ಯವಸ್ಥೆಯ ಸುತ್ತ ಕಥೆಯನ್ನು ಹೊಂದಿದೆ ಎಂದು ಉದಯ್ ಕುಮಾರ್ ಹೇಳಿದ್ದಾರೆ.

ಜನರು ತಿನ್ನಲು ಏನೂ ಬೇರೆ ಸಿಗದಿದ್ದಾಗ ಬನ್ ಮತ್ತು ಟೀಯನ್ನು ಆಶ್ರಯಿಸುತ್ತಾರೆ. ಇದು ಅನೇಕರಿಗೆ ಮುಖ್ಯ ಆಹಾರವಾಗಿದೆ. ಕಳೆದ ಏಳು ವರ್ಷಗಳ ಕನಸು ಈ ಚಿತ್ರ ಆಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ.

ಉದಯ್ ಕುಮಾರ್ ಅವರು ಚಿತ್ರಕ್ಕೆ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ರಾಧಾಕೃಷ್ಣ ಬ್ಯಾನರ್ ಅಡಿಯಲ್ಲಿ ಕೇಶವ್ ಆರ್ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರದ್ಯೋತನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಜಾ ರಾವ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಚಿತ್ರದಲ್ಲಿ ಮೌರ್ಯ, ತನ್ಮಯ್, ಶ್ರೀದೇವಿ, ಉಮೇಶ್ ಸಕ್ಕರೆ ನಾಡು, ನಿಶಾ, ಸುನಿಲ್ ಮೊದಲಾದವರು ನಟಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!