ಕೌಸಲ್ಯ ಸುಪ್ರಜಾ ರಾಮ ಚಿತ್ರದಲ್ಲಿ ಬೃಂದಾ ಆಚಾರ್ಯ ನಾಯಕಿ ಆಗಿ ನಟಿಸಲಿದ್ದಾರೆ.
ನಿರ್ದೇಶಕ ಶಶಾಂಕ್ ಅವರ ಮುಂದಿನ ಚಿತ್ರದಲ್ಲಿ ಕೃಷ್ಣ ನಾಯಕ ನಟನಾಗಿದ್ದಾರೆ. ಪ್ರೇಮಂ ಪೂಜ್ಯಂ, ಜ್ಯೂಲಿಯೆಟ್-2 ನಲ್ಲಿ ನಟಿಸಿದ್ದ ಬೃಂದಾ ಆಚಾರ್ಯ, ಈಗ ಕೃಷ್ಣ ಹಾಗೂ ಶಶಾಂಕ್ ಅವರೊಂದಿಗೆ ಮೊದಲ ಬಾರಿಗೆ ಜೊತೆಯಾಗಿದ್ದಾರೆ.
ಕೌಟುಂಬಿಕ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ತಾಯಿ-ಮಗನ ಸೆಂಟಿಮೆಂಟ್ ಇರಲಿದೆ. ನಟಿ ಬೃಂದಾದ ಪಾತ್ರದ ಬಗ್ಗೆ ವಿವರ ಹಂಚಿಕೊಂಡಿರುವ ಶಶಾಂಕ್, ಬೃಂದಾ ಆಚಾರ್ಯ ಶಿವಾನಿ ಹೆಸರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರು ಸಾಂಪ್ರದಾಯಿಕ ಹಾಗೂ ಆಧುನಿಕ ದೃಷ್ಟಿಕೋನದ ನಡುವೆ ಸಮತೋಲನ ಕಾಯ್ದುಕೊಳ್ಳುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರ ಇಂದಿನ ಪೀಳಿಗೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.
ಸಿನಿಮಾಗೆ ಆಫರ್ ಸಿಕ್ಕಿದ ಬಗ್ಗೆ ಮಾಹಿತಿ ನೀಡಿರುವ ಬೃಂದಾ, ಮತ್ತೊಂದು ಸಿನಿಮಾ ಶೂಟಿಂಗ್ ವೇಳೆಯಲ್ಲಿ ನಿರ್ದೇಶಕರು ನನ್ನನ್ನು ನೋಡಿದ್ದರು. ನಾನೂ ಅವರ ಸಿನಿಮಾಗಳ ಅಭಿಮಾನಿಯಾಗಿದ್ದೆ, ಮೊಗ್ಗಿನ ಮನಸು ನನ್ನ ಅಚ್ಚುಮೆಚ್ಚಿನ ಚಿತ್ರ. ಅವರೊಂದಿಗೆ ಕೆಲಸ ಮಾಡಲು ನಾನೂ ಆಸಕ್ತಳಾಗಿದ್ದೆ ಎಂದು ಹೇಳಿದ್ದಾರೆ.
Be the first to comment