ಬ್ರಾಟ್

ಬ್ರಾಟ್ ಚಿತ್ರದ ಸಕ್ಸಸ್ ಮೀಟ್

ಶಶಾಂಕ್ ನಿರ್ದೇಶನದ ಬ್ರಾಟ್ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಆಯೋಜನೆ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿತು.

ನಾಯಕ ಡಾರ್ಲಿಂಗ್ ಕೃಷ್ಣ ಸೇರಿದಂತೆ ಚಿತ್ರತಂಡದ ಎಲ್ಲಾ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಚಿತ್ರೀಕರಣದ ಅನುಭವಗಳನ್ನು ಹೇಳಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ನಟ ಡಾರ್ಲಿಂಗ್ ಕೃಷ್ಣ, ಚಿತ್ರಕ್ಕೆ ಜನರು ದೊಡ್ಡ ಮಟ್ಟದಲ್ಲಿ ಸ್ಪಂದನೆ ನೀಡಿರುವುದು ಖುಷಿ ತಂದಿದೆ. ನನ್ನ ಹೆಂಡತಿ ನನ್ನ ಲುಕ್ ಬಗ್ಗೆ ಯಾವತ್ತೂ ಮಾತನಾಡಿರಲಿಲ್ಲ. ಆದರೆ ಕ್ರಿಸ್ಟಿ ಲುಕ್ ಬಗ್ಗೆ ಚೆನ್ನಾಗಿದೆ ಎಂದು ಹೇಳಿದಳು. ಚಿತ್ರೀಕರಣದ ವೇಳೆ ನನಗೆ ಸಾಕಷ್ಟು ಸುಸ್ತು ಆಗುತ್ತಿತ್ತು. ಲೆನ್ಸ್, ಹೇರ್ ಸ್ಟೈಲ್ ಇವುಗಳನ್ನು ಮೈನ್ ಟೈನ್ ಮಾಡುವುದು ಕಷ್ಟ ಆಗುತ್ತಿತ್ತು. ಆದರೆ ಪ್ರಯತ್ನಕ್ಕೆ ಉತ್ತಮ ಫಲ ಸಿಕ್ಕಿದೆ ಎಂದರು.

ಬ್ರಾಟ್

ನಾಯಕ ನಟಿ ಮನಿಷಾ ಕಂದಕೂರ್ ಮಾತನಾಡಿ, ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಸ್ಪಂದನೆ ನೀಡಿರುವುದು ಸಂತಸ ತಂದಿದೆ. ಇಷ್ಟು ದೊಡ್ಡ ಮಟ್ಟದ ಸ್ಪಂದನೆ ಸಿಗುತ್ತದೆ ಎಂದು ಗೊತ್ತಿರಲಿಲ್ಲ. ಚಿತ್ರ ತಂಡದ ಜೊತೆಗೆ ಕೆಲಸ ಮಾಡಿದ್ದು ಸಾಕಷ್ಟು ಖುಷಿ ತಂದಿದೆ ಎಂದು ಹೇಳಿದರು.

ನಿರ್ಮಾಪಕ ಮಂಜುನಾಥ್ ಮಾತನಾಡಿ, ಚಿತ್ರ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿರುವುದಕ್ಕೆ ತುಂಬಾ ಸಂತೋಷವಾಗಿದೆ. ಮಾಸ್ಟರ್ ಪೀಸ್ ನೀಡಿದ ಶಶಾಂಕ್ ಅವರಿಗೆ ಅಭಿನಂದನೆಗಳನ್ನು ಹೇಳಬೇಕು ಎಂದರು.

ಚಿತ್ರದ ನಿರ್ದೇಶಕ ಶಶಾಂಕ್ ಮಾತನಾಡಿ, ಒಂದಷ್ಟು ವಾಸ್ತವಿಕ ಪಾತ್ರಗಳನ್ನು ತೆಗೆದುಕೊಂಡು ಈ ಚಿತ್ರವನ್ನು ಸಿದ್ದ ಮಾಡಲಾಯಿತು. ಸ್ಕ್ರಿಪ್ಟ್ ಆದ ಬಳಿಕ ಚಿತ್ರದ ಬಗ್ಗೆ ವಿಶ್ವಾಸ ಮೂಡಿತು. ಈ ರೀತಿಯ ಚಿತ್ರಗಳನ್ನು ನಿರ್ಮಿಸುವುದು ತುಂಬಾ ಕಷ್ಟವಾದದ್ದು. ಚಿತ್ರದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇದೆ. ಇಷ್ಟೊಂದು ಟ್ವಿಸ್ಟ್ ಗಳನ್ನು ಹೇಗೆ ನೀಡಿದ್ದೀರಿ ಎಂದು ಪ್ರೇಕ್ಷಕರು ಖುಷಿಯಿಂದ ಪ್ರಶ್ನೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಬ್ರಾಟ್

ಹಲವರು ನಾನು ಲವ್ ಹಾಗೂ ಫ್ಯಾಮಿಲಿ ಚಿತ್ರಗಳಿಗೆ ಸೂಕ್ತ ಎಂದು ಹೇಳುತ್ತಾರೆ. ಈ ರೀತಿಯ ಅಕ್ಷನ್ ಚಿತ್ರ ಯಾಕೆ ಬೇಕಿತ್ತು ಎಂದು ಕೆಲವರು ಕೇಳಿದ್ದಾರೆ. ನಿರ್ಮಾಪಕರು ಈ ಚಿತ್ರಕ್ಕೆ ಬೆಂಬಲ ನೀಡಿದ ಬಳಿಕ ಚಿತ್ರ ಮಾಡಲು ಧೈರ್ಯ ಬಂತು ಎಂದು ಹೇಳಿದರು.

ನಿರ್ದೇಶಕರು ಚಿತ್ರ ಉತ್ತಮವಾಗಿ ಮೂಡಿ ಬರಲು ಕಾರಣರಾದ ಚಿತ್ರತಂಡದ ಎಲ್ಲಾ ಸದಸ್ಯರಿಗೆ ಧನ್ಯವಾದಗಳು ಹೇಳಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!