ಬ್ರ್ಯಾಟ್

ಅ.31ಕ್ಕೆ ‘ಬ್ರ್ಯಾಟ್’ ಚಿತ್ರ ರಿಲೀಸ್

ಕೆ ವಿ ಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿರುವ ಬ್ರ್ಯಾಟ್ ಚಿತ್ರ ಅಕ್ಟೋಬರ್ 31 ರಂದು ಬಿಡುಗಡೆ ಆಗಲಿದೆ.

ಶಶಾಂಕ್ ನಿರ್ದೇಶನದ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರವು ಕೊಟ್ಟು ಐದು ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಚಿತ್ರದ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ.

ಬಾಳು ಬೆಳಗುಂದಿ ಅವರು ಬರೆದು ಹಾಡಿರುವ ಬ್ರ್ಯಾಟ್ ಚಿತ್ರದ ಒಂದು ಹಾಡು ರಿಲೀಸ್ ಆಗಿದೆ. ಹಾಡಿಗೆ ಇಂದು ನಾಗರಾಜ್ ಅವರು ಧ್ವನಿಗೂಡಿಸಿದ್ದಾರೆ. ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಬ್ರ್ಯಾಟ್ ಎಂದರೆ ತರಲೆ ಹುಡುಗ ಅಥವಾ ದಾರಿ ತಪ್ಪಿದ ಮಗ ಎನ್ನುವ ಅರ್ಥದ ಇದೆ. ಚಿತ್ರ ಆಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು , ಅಪ್ಪ ಹಾಗೂ ಮಗನ ಸೆಂಟಿಮೆಂಟ್ ಇಲ್ಲಿದೆ.

ಚಿತ್ರವನ್ನು ಮಂಜುನಾಥ್ ಕಂದಕೂರ್ ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಮನಿಷಾ ಕಂದಕೂರ್ ಕಾಣಿಸಿಕೊಂಡಿದ್ದಾರೆ. ಭೀಮಾ ಖ್ಯಾತಿಯ ಡ್ರ್ಯಾಗನ್ ಮಂಜು ಚಿತ್ರದಲ್ಲಿ ನಟಿಸಿದ್ದಾರೆ.

ಬ್ರ್ಯಾಟ್

Be the first to comment

Leave a Reply

Your email address will not be published. Required fields are marked *

Translate »
error: Content is protected !!