ಸಿದ್ದು ಪೂರ್ಣಚಂದ್ರ ಅವರ ನಿರ್ಮಾಣ, ನಿರ್ದೇಶನದ ‘ಬ್ರಹ್ಮಕಮಲ’ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದೆ.
ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣಪತ್ರ ಲಭಿಸಿದೆ. ಚಿತ್ರ ಶೀಘ್ರ ರಿಲೀಸ್ ಆಗುವ ನಿರೀಕ್ಷೆ ಇದೆ.
ರಾತ್ರಿ ಹುಟ್ಟಿ, ರಾತ್ರಿಯೇ ಮುರುಟಿ ಹೋಗುವ ಒಂದು ಮಗುವಿನ ಸುತ್ತ ಘಟಿಸುವ ಕಥೆಯೇ ‘ಬ್ರಹ್ಮ ಕಮಲ’. ಇದು ಮಹಿಳಾ ಪ್ರಧಾನ ಕಥೆ. ಅದ್ವಿತಿ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ.
ಲೋಕೇಂದ್ರ ಸೂರ್ಯ, ಋತು ಚೈತ್ರ, ಮಮತಾ ರಾಹುತ್, ಪ್ರಮಿಳಾ ಸುಬ್ರಹ್ಮಣ್ಯ, ಬಲ ರಾಜ್ವಾಡಿ, ಸಿದ್ದು ಪೂರ್ಣಚಂದ್ರ, ಆಟೋ ನಾಗರಾಜ್, ಗಂಡಸಿ ಸದಾನಂದಸ್ವಾಮಿ, ಕವಿತಾ ಕಂಬಾರ್, ರಾಧಾ ರಾಮಚಂದ್ರ ತಾರಾಬಳಗದಲ್ಲಿದ್ದಾರೆ.
ಲೋಕೇಂದ್ರ ಸೂರ್ಯನಾರಾಯಣ ಅವರ ಛಾಯಾಗ್ರಹಣ, ದೀಪು ಸಿ ಎಸ್ ಸಂಕಲನ, ಅನಂತ್ ಆರ್ಯನ್ ಸಂಗೀತದ ಹೊಣೆ ಹೊತ್ತಿದ್ದಾರೆ.
__

Be the first to comment