ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ವಿರುದ್ಧ ನೆಟ್ಟಿಗರಿಂದ ಬಹಿಷ್ಕಾರದ ಅಭಿಯಾನ ಶುರುವಾಗಿದೆ.
2023 ರಲ್ಲಿ ಬಿಡುಗಡೆಯಾಗಲಿರುವ ಪಠಾಣ್ ಸಿನಿಮಾ ಬಹಿಷ್ಕರಿಸುವಂತೆ ನೆಟ್ಟಿಗರು ಕರೆ ಶುರು ಮಾಡಿದ್ದಾರೆ. ಈ ಹಿಂದೆ ಶಾರುಖ್ ಖಾನ್ ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದಿದ್ದರು. ಇದನ್ನು ಉಲ್ಲೇಖಿಸಿ ಶಾರುಖ್ ಸಿನಿಮಾವನ್ನು ಬಹಿಷ್ಕರಿಸಲು ಕರೆ ನೀಡಲಾಗುತ್ತಿದೆ.
ಬಾಲಿವುಡ್ ಸಿನಿಮಾಗಳು ಇತ್ತೀಚೆಗೆ ಬಹಿಷ್ಕಾರದ ಅಭಿಯಾನದಿಂದ ನೆಲಕಚ್ಚುತ್ತಿದೆ. ಇದಕ್ಕೆ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಮತ್ತು ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಸಿನಿಮಾಗಳು.
ಹಿಂದೂ ದೇವರಿಗೆ ಅವಮಾನ ಮಾಡಿದ್ದಕ್ಕೆ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ, ಅಕ್ಷಯ್ ಕುಮಾರ್ ಅವರ ರಕ್ಷಾ ಬಂಧನ್ ಸಿನಿಮಾ ವಿರುದ್ಧ ಬಹಿಷ್ಕಾರದ ಅಭಿಯಾನ ಮಾಡಲಾಗಿತ್ತು. ಲಾಲ್ ಸಿಂಗ್ ಛಡ್ಡಾ, ರಕ್ಷಾ ಬಂಧನ್ ಸಿನಿಮಾಗಳು ಬಹಿಷ್ಕಾರದ ಅಭಿಯಾನದ ಬಿಸಿಯಿಂದಾಗಿ ಬಾಕ್ಸ್ ಆಫೀಸ್ ನಲ್ಲಿ ಸೋತು ಹೋಗಿವೆ.
ರಕ್ಷಾ ಬಂಧನ್ ಮೂಲಕ ಅಕ್ಷಯ್ ಕುಮಾರ್ ಅವರಿಗೆ ಹ್ಯಾಟ್ರಿಕ್ ಸೋಲು ಉಂಟಾಗಿದೆ. ಈ ವರ್ಷ ಮಾರ್ಚ್ 18ರಂದು ಬಿಡುಗಡೆಯಾದ ಬಚ್ಚನ್ ಪಾಂಡೆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮೋಡಿ ಮಾಡಲಿಲ್ಲ. ಈ ಚಿತ್ರದಿಂದ ಅಕ್ಷಯ್ ಕುಮಾರ್ಗೆ ಗೆಲುವು ಸಿಗಲಿಲ್ಲ. ಆ ನಂತರ ಅವರ ಅಭಿಮಾನಿಗಳು ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದರು. ಆದರೆ ಆ ಸಿನಿಮಾ ಸೋತಿತು.
ಆಗಸ್ಟ್ 11ರಂದು ಬಿಡುಗಡೆಯಾದ ‘ರಕ್ಷಾ ಬಂಧನ್’ ಸಿನಿಮಾದಲ್ಲಿ ಫ್ಯಾಮಿಲಿ ಕಥಾಹಂದರ ಇದೆ. ರಕ್ಷಾ ಬಂಧನ ಹಬ್ಬ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಈ ಚಿತ್ರಕ್ಕೆ ಒಳ್ಳೆಯ ಕಲೆಕ್ಷನ್ ಆಗಬಹುದು ಎಂದು ನಂಬಲಾಗಿತ್ತು. ಆದರೆ ನಾಲ್ಕು ದಿನಕ್ಕೆ ಈ ಚಿತ್ರ ಗಳಿಸಿದ್ದು ಕೇವಲ 28 ಕೋಟಿ ರೂಪಾಯಿ ಮಾತ್ರ.
ಹೃತಿಕ್ ರೋಷನ್ ನಾಯಕರಾಗಿರುವ ವಿಕ್ರಮ್ ವೇದಾ ಚಿತ್ರಕ್ಕೆ ಬಹಿಷ್ಕಾರದ ಭೀತಿ ಎದುರಾಗಿದೆ.
ಹೃತಿಕ್ ಇತ್ತೀಚೆಗೆ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಸಿನಿಮಾವನ್ನು ಹೊಗಳಿದ್ದರು. ಈ ಕಾರಣಕ್ಕೆ ಈಗ ಹೃತಿಕ್ ಸಿನಿಮಾವನ್ನು ಬಹಿಷ್ಕರಿಸಲು ನೆಟ್ಟಿಗರು ಕರೆ ಕೊಟ್ಟಿದ್ದಾರೆ.
___
Be the first to comment