‘ಕಾಂತಾರ 1’ ಸಿನಿಮಾಕ್ಕೆ ರಶ್ಮಿಕಾ ಸಿನಿಮಾ ಬ್ರೇಕ್?

‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ರಶ್ಮಿಕಾ ಮಂದಣ್ಣ ಸಿನಿಮಾ  ‘ಥಮ’  ಬ್ರೇಕ್ ಹಾಕಲಿದೆಯೇ ಎಂದು ಪ್ರೇಕ್ಷಕರು   ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಎರಡು ವಾರಗಳ ನಂತರವೂ ಬಾಕ್ಸ್​​ಆಫೀಸ್​​ನಲ್ಲಿ ಭರ್ಜರಿ ಪ್ರದರ್ಶನ ಮಾಡುತ್ತಿದೆ. ಬೇರೆ ಭಾಷೆಗಳಲ್ಲಿ ಯಾವುದೇ ದೊಡ್ಡ ಸಿನಿಮಾ ಬಿಡುಗಡೆಯಾಗದ ಕಾರಣ ಚಿತ್ರ  ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಹಿಂದಿಯಲ್ಲಿಯೂ ‘ಕಾಂತಾರ 1’ 150 ಕೋಟಿ ಕಲೆಕ್ಷನ್​​ಗೆ ಮೀರಿದ ಯಶಸ್ಸು ಕಂಡಿದೆ.

ರಶ್ಮಿಕಾ ಮಂದಣ್ಣ ನಟನೆಯ ಹಿಂದಿ ಸಿನಿಮಾ ‘ಥಮ’ ಅಕ್ಟೋಬರ್ 21 ರಂದು ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ, ‘ಕಾಂತಾರ: ಚಾಪ್ಟರ್ 1’ ಮತ್ತು ‘ಥಮ’ ಬಾಕ್ಸ್​​ಆಫೀಸ್​​ನಲ್ಲಿ ಪರಸ್ಪರ ಎದುರಾಗಲಿವೆ.  ಪ್ರೇಕ್ಷಕರು ಯಾವ ಸಿನಿಮಾ ಹೆಚ್ಚು ಯಶಸ್ಸು ಪಡೆಯುತ್ತದೆಯೆಂಬುದರ ಮೇಲೆ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

‘ಥಮ’ ನಾಯಕ  ಆಯುಷ್ಮಾನ್ ಖುರಾನಾ. ನವಾಜುದ್ಧೀನ್ ಸಿದ್ಧಿಖಿ ವಿಲನ್, ಮ್ಯಾಡ್​​ಲಾಕ್ ನಿರ್ಮಿತ ಈ ಚಿತ್ರ ಹಾರರ್ ಕಥಾವಸ್ತು ಹೊಂದಿದೆ. ‘ಥಮ’ ಸಿನಿಮಾದಲ್ಲಿ ರಶ್ಮಿಕಾ ಹಿಂದಿನ ಸಿನಿಮಾಗಳಿಗಿಂತ ಹೆಚ್ಚು ಹಾಟ್ ಮತ್ತು ಗ್ಲಾಮರಸ್ ನಟನೆಯೊಂದಿಗೆ ಮೂರು ಐಟಂ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!