ಡಿಸೆಂಬರ್ 9ರಂದು ‘ಬಾಂಡ್ ರವಿ’ ಪ್ರೇಕ್ಷಕರನ್ನು ರಂಜಿಸಲು ಚಿತ್ರಮಂದಿರಕ್ಕೆ ಬರಲಿದ್ದು, ಡೈರೆಕ್ಟರ್ ಪ್ರಜ್ವಲ್ ಎಸ್.ಪಿ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ.
ಬಾಂಡ್ ರವಿ ಚಿತ್ರದ ಜಬರ್ ದಸ್ತ್ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು ನಿರೀಕ್ಷೆ ಹುಟ್ಟಿಸಿದೆ. ‘ರತ್ನನ್ ಪ್ರಪಂಚ’ ಚಿತ್ರದಲ್ಲಿ ಉಡಾಳ್ ಬಾಬು ಪಾತ್ರದ ಮೂಲಕ ಖ್ಯಾತಿ ಗಳಿಸಿರುವ ಪ್ರಮೋದ್ ‘ಬಾಂಡ್ ರವಿ’ಯಾಗಿ ಹೊಸ ಅವತಾರದಲ್ಲಿ ಬರಲು ಸಿದ್ಧರಾಗಿದ್ದಾರೆ. ಪ್ರಜ್ವಲ್ ಎಸ್.ಪಿ ನಿರ್ದೇಶನದ ಇದು ಬಹು ನಿರೀಕ್ಷಿತ ಚಿತ್ರ ಆಗಿದೆ.
ಚಿತ್ರದ ನಿರ್ದೇಶಕರು ಹಿರಿಯೂರಿನ ಹೈನಲ್ಲಿಯವರು. 12 ವರ್ಷ ಅಸಿಸ್ಟೆಂಟ್ ಡೈರೆಕ್ಟರ್, ಕೊ ಡೈರೆಕ್ಟರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಪ್ರಶಾಂತ್ ರಾಜ್, ಮಹೇಂದರ್ ಅವರ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಬಾಂಡ್ ರವಿ ಅವಕಾಶ ಸಿಕ್ಕಿದ್ದು ನರಸಿಂಹ ಮೂರ್ತಿ ಅವರ ಕಡೆಯಿಂದ. ಈ ಚಿತ್ರ ನನ್ನ ಲೈಫ್ ಗೆ ಲೈನ್ ಆಗಿದೆ. ಎರಡು ಗಂಟೆ ಕುಳಿತು ಪ್ರಮೋದ್ ಸರ್ ಕಥೆ ಕೇಳಿ ಓಕೆ ಮಾಡಿದರು ಎಂದು ನಿರ್ದೇಶಕ ಪ್ರಜ್ವಲ್ ಹೇಳಿದ್ದಾರೆ.
ಮನೋಮೂರ್ತಿ ಸಂಗೀತ, ಚಂದ್ರಶೇಖರ್ ಅಂತ ದೊಡ್ಡ ಕ್ಯಾಮೆರಾಮೆನ್ ಚಿತ್ರದಲ್ಲಿದ್ದಾರೆ. ನಾನು ಇಲ್ಲಿ ನಿಲ್ಲಲು ಕಾರಣ ಸಂಕಲನಕಾರ ಆದ ಕಿಟ್ಟು ಅವರು. ಬಾಂಡ್ ರವಿ ಪಾತ್ರ ಯಾರೂ ನೋಡಿರುವುದಿಲ್ಲ ಮನೆಗೆ ಹೋದಾಗಲೂ ಬಾಂಡ್ ರವಿ ನೆನಪಾಗುತ್ತಾನೆ. ಬಾಂಡ್ ರವಿ ಟ್ರೆಂಡ್ ಸೆಟ್ಟರ್ ಆಗಲಿದೆ ಎನ್ನುತ್ತಾರೆ ಡೈರೆಕ್ಟರ್.
ಲೈಫ್ ಲೈನ್ ಒಂದು ಸಿನಿಮಾಕ್ಕೆ ಸೀಮಿತ ಅಲ್ಲ. ಈ ಮೂಲಕ ಪ್ರೊಡಕ್ಷನ್ ಹೌಸ್ ಮಾಡಬೇಕೆಂಬ ಕನಸು ನಿರ್ಮಾಪಕರಿಗೆ ಇದೆ ಎಂದು ಪ್ರಜ್ವಲ್ ಹೇಳಿದ್ದಾರೆ.
ಆಕ್ಷನ್ ಲವ್ ಸ್ಟೋರಿ ಒಳಗೊಂಡ ಈ ಚಿತ್ರಕ್ಕೆ ನರಸಿಂಹಮೂರ್ತಿ ವಿ. ಲೈಫ್ ಲೈನ್ ಫಿಲಂ ಬ್ಯಾನರ್ ನಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣ ಚಿತ್ರಕ್ಕಿದೆ.
ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಚಿತ್ರದ ತಾರಾ ಬಳಗದಲ್ಲಿದ್ದಾರೆ.
ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನೀಲ್ ಮತ್ತು ದೇವ್ ಎನ್. ರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ವಿಜಯ ಪ್ರಕಾಶ್ ದನಿಯಾಗಿರುವ ‘ಮಜ ಮಜ ಮಾಡು ಬಾ’, ಸೋನು ನಿಗಂ ದನಿಯಾಗಿರುವ ರೋಮ್ಯಾಂಟಿಕ್ ಸಾಂಗ್ ‘ಸಹಜ ಸಖಿ ಹಾಡುಗಳು ಮೆಚ್ಚುಗೆ ಪಡೆದಿವೆ.
_______

Be the first to comment