ಬಾಂಡ್ ರವಿ ಸಿನಿಮಾಕ್ಕೆ ಪ್ರಮೋದ್ ನಾಯಕ

‘ಪ್ರೀಮಿಯರ್ ಪದ್ಮಿನಿ’, ‘ರತ್ನನ್ ಪ್ರಪಂಚ’ ಸಿನಿಮಾಗಳಲ್ಲಿ ನಟಿಸಿದ್ದ ಪ್ರಮೋದ್ ಈಗ ‘ಬಾಂಡ್ ರವಿ’ ಸಿನಿಮಾದಲ್ಲಿ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಪ್ರಜ್ವಲ್ ಎ.ಪಿ ಅವರು ಬಾಂಡ್ ರವಿ ಸಿನಿಮಾದ ನಿರ್ದೇಶನ ಹೊಣೆ ಹೊತ್ತಿದ್ದಾರೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ಬಾಂಡ್ ರವಿ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದೆ. ಪ್ರಮೋದ್ ಹಣೆಯಲ್ಲಿ ರಕ್ತ, ಕೈಯಲ್ಲಿ ಬೇಡಿ ತೊಟ್ಟು ಖಡಕ್ ಲುಕ್ ನಲ್ಲಿ ಕಂಡು ಬಂದಿದ್ದಾರೆ. ಕಮರ್ಷಿಯಲ್ ಅಂಶಗಳನ್ನು ಹೊಂದಿರುವ ಬಾಂಡ್ ರವಿ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ.

ನಿರ್ದೇಶಕ ಪ್ರಜ್ವಲ್ ಅವರು ಕಳೆದ 11 ವರ್ಷಗಳಿಂದ ನಎಸ್ ಮಹೇಂದರ್, ಪ್ರಶಾಂತ್ ರಾಜ್, ಕಾಂತಾ ಕನ್ನಹಳ್ಳಿ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ.

ಚಿತ್ರಕ್ಕೆ ಲೈಫ್ ಲೈನ್ ಫಿಲ್ಮಸ್ ಬ್ಯಾನರ್ ನಡಿ ನರಸಿಂಹಮೂರ್ತಿ ಬಂಡವಾಳ ಹೂಡಿದ್ದಾರೆ. ಮಲ್ಲಿಕಾರ್ಜುನ್ ಕಾಶಿ, ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ‘ಬಾಂಡ್ ರವಿ’ ಸಿನಿಮಾಗೆ ಮನೋಮೂರ್ತಿ ಸಂಗೀತ, ನಾಗೇಂದ್ರಪ್ರಸಾದ್ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ.

ರತ್ನನ್ ಪ್ರಪಂಚ’ ಸಿನಿಮಾದಲ್ಲಿ ಪ್ರಮೋದ್ ನಿರ್ವಹಿಸಿದ್ದ ಉಢಾಳ್ ಬಾಬು ಪಾತ್ರ ಸಾಕಷ್ಟು ಜನಪ್ರಿಯವಾಗಿತ್ತು.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!