ನಿರ್ದೇಶಕ : ಪ್ರಜ್ವಲ್ .ಎಸ್.ಪಿ
ನಿರ್ಮಾಪಕ : ನರಸಿಂಹ ಮೂರ್ತಿ
ತಾರಾ ಬಳಗ: ಪ್ರಮೋದ್, ಕಾಜಲ್‍ಕುಂದರ್, ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್, ಕುರಿ ರಂಗ, ಗೋವಿಂದೇಗೌಡ, ಮಿಮಿಕ್ರಿಗೋಪಿ, ಪವನ್ ಹಾಗೂ ಮುಂತಾದವರು.
ರೇಟಿಂಗ್: 4/5
ಜೀವನದ ಸ್ನೇಹ, ಪ್ರೀತಿ, ವಿಶ್ವಾಸ, ಕೆಟ್ಟತನ ಹೇಗೆ ಯಾವಾಗ ರೂಪ ಪಡೆದು ಹೊರಬರುತ್ತದೆ ಎನ್ನುವ ವಿಚಾರವನ್ನು ಆಕ್ಷನ್, ಲವ್, ರೌಡಿಸಂ, ಕಾಮಿಡಿ ಮೂಲಕ ತೆರೆದಿಟ್ಟಿರುವ ಚಿತ್ರ “ಬಾಂಡ್ ರವಿ”.
ಬಾಂಡ್ ರವಿ (ಪ್ರಮೋದ್) ಹಣಕ್ಕೋಸ್ಕರ ಏನು ಬೇಕಾದರೂ ಮಾಡುವ ವ್ಯಕ್ತಿ. ಕಾರ್ಪೊರೇಟರ್ ಭುಜಂಗ (ಶೋಭರಾಜ್) ಜಾಗದ ವಿಚಾರವಾಗಿ ಒಬ್ಬನನ್ನ ಕೊಲೆ ಮಾಡುತ್ತಾನೆ. ಈ ಕೊಲೆಯ ಆರೋಪವನ್ನು ಬಾಂಡ್ ರವಿ ಹಣ ಪಡೆದು ತನ್ನ ಮೇಲೆ ಹಾಕಿಕೊಳ್ಳುತ್ತಾನೆ.
ರವಿಯ ಮೊಬೈಲ್‍ಗೆ ಬ್ಯಾಂಕ್‍ನಿಂದ ಲೋನ್ ಬೇಕೇ ಎಂದು ಶ್ವೇತಾ(ಕಾಜಲ್ ಕುಂದರ್) ಕರೆ ಮಾಡುತ್ತಾಳೆ. ಆಕೆ ಮಾಡಿದ ಕರೆ ರವಿಯ ಜೀವನದ ದಿಕ್ಕನ್ನೇ ಬದಲಿಸುತ್ತದೆ. ಶ್ವೇತಾಗೆ ಟಾರ್ಗೆಟ್ ರೀಚ್ ಮಾಡಲು ಸಹಾಯ ಮಾಡಿ ಆಕೆಯ ಸಂಕಷ್ಟ ದೂರ ಮಾಡಿದ ರವಿ ಅವಳನ್ನು ಪ್ರೀತಿಸುತ್ತಾನೆ.
ಜೈಲಿಂದ ಹೊರಬಂದ ರವಿ, ಶ್ವೇತಾಳ ಮನೆಗೆ ಬಂದು ಅಲ್ಲಿ ಹೊಸಜೀವನ ಪ್ರಾರಂಭಿಸುತ್ತಾನೆ. ಚಾಲಕನಾಗಿ ಕೆಲಸ ಮಾಡುವ ರವಿ ಮೇಲೆ ಭುಜಂಗ (ಶೋಭರಾಜ್) ಕೊಲೆಯ ಆರೋಪ ಬರುತ್ತದೆ.
ಶ್ವೇತಾ ಮಾಡಿದ ಪ್ಲಾನ್ ಏನು?, ಕಾರ್ಪೊರೇಟರ್ ಸಾವಿಗೆ ಕಾರಣ ಯಾರು?, ಪೊಲೀಸರಿಗೆ ಸಿಗುವ ಮಾಹಿತಿ ಏನು? ಒಟ್ಟಾರೆ ಕ್ಲೈಮಾಕ್ಸ್ ತಿಳಿಯಲು “ಬಾಂಡ್ ರವಿ” ಚಿತ್ರವನ್ನು ನೋಡಬೇಕು.
ಪ್ರಮೋದ್ ಬಾಂಡ್ ರವಿಯಾಗಿ ತನ್ನದೇ ಖಡಕ್ ಡೈಲಾಗ್, ಫೈಟ್, ಡ್ಯಾನ್ಸ್ , ನಂಬಿಕೆಯ ಪ್ರೇಮಿಯಾಗಿ ಮನ ಮುಟ್ಟುವಂತೆ ನಟಿಸಿದ್ದಾರೆ. ನಾಯಕಿ ಕಾಜಲ್ ತನಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಶೋಭರಾಜ್, ರವಿ ಕಾಳೆ, ಧರ್ಮ, ವಿಜಯ್ ಚೆಂಡುರ್, ಗೋವಿಂದೇ ಗೌಡ, ರಾಘು ರಾಮನ ಕೊಪ್ಪ , ಕುರಿ ರಂಗ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಅಚ್ಚುಕಟ್ಟಾಗಿ ಚಿತ್ರಕಥೆ ಹೆಣೆಯುವಲ್ಲಿ ನಿರ್ದೇಶಕ ಪ್ರಜ್ವಲ್ ಯಶಸ್ವಿಯಾಗಿದ್ದಾರೆ. ಮನೋ ಮೂರ್ತಿ ಸಂಗೀತ, ಚಂದ್ರಶೇಖರ್ ಕ್ಯಾಮರಾ ಕೆಲಸ ಚಿತ್ರಕ್ಕೆ ಪೂರಕ ಆಗಿ ಕೆಲಸ ಮಾಡಿದೆ.
_____
Be the first to comment