ಮಹಾ ಶಿವರಾತ್ರಿಯಂದು ‘ಬೊಮ್ಮನಗುಡ್ಡೆ’ ಚಿತ್ರಕ್ಕೆ ಚಾಲನೆ

ಜೆ.ಕೆ.ಪ್ರೊಡಕ್ಶನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಎಡೆಯೂರು ಸುರೇಶ್ ಹಾಗೂ ಭದ್ರಣ್ಣ ಅವರ ಸಹ ನಿರ್ಮಾಣವಿರುವ `ಬೊಮ್ಮನ ಗುಡ್ಡೆ` ಚಿತ್ರದ ಮುಹೂರ್ತ ಸಮಾರಂಭ ಮಹಾ ಶಿವರಾತ್ರಿ ಶುಭದಿನದಂದು ಬೊಮ್ಮನಗುಡ್ಡೆ ಮುನೇಶ್ವರ ದೇವಸ್ಥಾನದಲ್ಲಿ ನೆರವೇರಿತು.

ಚಿತ್ರದ ಮೊದ ದೃಶ್ಯಕ್ಕೆ ಮಹದೇವಯ್ಯ ಅವರು ಆರಂಭ ಫಲಕ ತೋರಿದರು. ಕೃಷ್ಣಪ್ಪ ಕ್ಯಾಮೆರಾ ಚಾಲನೆ ಮಾಡಿದರು. ಒಂದು ವರ್ಷದ ಮಗು ಗೋಪಾಲಕೃಷ್ಣನ ಕೈಯಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆಯಾಯಿತು. ಎಂ ಎಲ್ ಎ ರಂಗಾನಾಥ್, ಕಿಲಾರ ವಿಜಿ, ಟಿ.ಮಲ್ಲಿಕಾರ್ಜುನ, ಕೃಷ್ಣಪ್ಪ ಹಾಗೂ ಗ್ರಾಮದ ಮುಖ್ಯಸ್ಥರು ಈ ಸಮಾರಂಭಕ್ಕೆ ಅಗಮಿಸಿ ಶುಭ ಕೋರಿದರು. ಚಿತ್ರಕ್ಕೆ ಬೊಮ್ಮನಗುಡ್ಡೆ ಗ್ರಾಮದಲ್ಲೇ ಮೂವತ್ತು ದಿನಗಳ ಚಿತ್ರೀಕರಣ ನಡೆಯಲಿದೆ.

ನೈಜ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಶಿವರಾಜ್ ಬಿ.ಎಂ.(ಹಳ್ಳಿಹುಲಿ) ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತರಚನೆ ಕೂಡ ಶಿವರಾಜ್ ಅವರದೆ. ೨೦೧೦ರಂಲ್ಲಿ ತೆರೆಕಂಡ `ನಮಿತಾ ಐ ಲವ್ ಯೂ` ಚಿತ್ರದ ಮೂಲಕ ಹಾಸ್ಯನಟನಾಗಿ ಪಾದಾರ್ಪಣೆ ಮಾಡಿ ನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಹಾಗೂ ಹಲವು ನಿರ್ದೆಶಕರ ಬಳಿ ನಿರ್ದೇಶನ ತಂಡದಲ್ಲೂ ಕಾರ್ಯ ನಿರ್ವಹಿಸಿರುವ ಅನುಭವ ನಿರ್ದೇಶಕರಿಗಿದೆ. ಇದು ಅವರ ನಿರ್ದೇಶನದ ಚೊಚ್ಚಲ ಚಿತ್ರ.

ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ತರುಣ್ ಸೈಮೆಂಟ್ ಅವರ ಸಂಗೀತ ನಿರ್ದೇಶನವಿದೆ. ರಾಜೇಶ್ ಗೌಡ ಛಾಯಾಗ್ರಹಣ, ಹಾಗೂ ಕವಿತಾ ಭಂಡಾರಿ ಅವರ ಸಂಕಲನ ಈ ಚಿತ್ರಕ್ಕಿದೆ. ಬಿರಾದಾರ್, ಟೆನ್ನಿಸ್ ಕೃಷ್ಣ ಹಾಗೂ ಬ್ಯಾಂಕ್ ಜನಾರ್ದನ್ ಮುಂತಾದವರು ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.

This Article Has 2 Comments
  1. Pingback: Digital Transformation company

Leave a Reply

Your email address will not be published. Required fields are marked *

Translate »
error: Content is protected !!