ರಾಮನಗರ ಮೂಲದ ಉದ್ಯಮಿ ಮನೋಜ್ ಗೌಡ ಅವರು ಹಿಂದಿ ಚಿತ್ರರಂಗದಲ್ಲಿ ನಿರ್ಮಾಪಕ ಆಗಿ ನೆಲೆ ಕಾಣಲು ಮುಂದಾಗಿದ್ದಾರೆ.
ರಾಮನಗರ ಜಿಲ್ಲೆಯ ಅನುಮಾನ ಹಳ್ಳಿಯ ಮನೋಜ್ ಗೌಡ ಅವರು ಬೆಂಗಳೂರಿನಲ್ಲಿ ಕೆಲಸ ಹುಡುಕಿಕೊಂಡು ಬಂದು ಮಣಿಪಾಲ ಆಸ್ಪತ್ರೆಯಲ್ಲಿ ಕ್ಯಾಂಟೀನ್ ಕೆಲಸ ಆರಂಭಿಸಿದರು. ಬಳಿಕ ಬೆಂಗಳೂರಿನ 20 ಆಸ್ಪತ್ರೆಗಳಲ್ಲಿ ಕ್ಯಾಟರಿಂಗ್ ಆರಂಭಿಸುವ ಮೂಲಕ ಯಶಸ್ವಿ ಉದ್ಯಮಿ ಅನಿಸಿಕೊಂಡಿದ್ದಾರೆ. ಈಗ ಅವರು ಹಿಂದಿ ಚಿತ್ರರಂಗದಲ್ಲಿ ನಿರ್ಮಾಪಕ ಆಗಿ ಯಶಸ್ಸು ಕಾಣಲು ಮುಂದಾಗಿದ್ದಾರೆ.
ಸಿನಿಮಾದ ಶೂಟಿಂಗ್ ನೋಡಲು ಹೋದ ಅವರು ಒಳಿಕ ನಿರ್ಮಾಪಕರಾಗಿ ಕಾಲಿಟ್ಟರು. ರಾಯಲ್ ಮೂವೀಸ್ ಬ್ಯಾನರ್ ಮೂಲಕ 2021 ರಲ್ಲಿ ಎಂದು ನಿನ್ನ ನೋಡುವೆ ಕನ್ನಡ ಸಿನಿಮಾ ನಿರ್ಮಿಸಿದರು. ಇದರ ಜೊತೆಗೆ ಅವರು ಪ್ರಮುಖ ಪಾತ್ರ ನಿರ್ವಹಿಸಿದರು. ಈಗ ಈ ಚಿತ್ರ ರಿಲೀಸ್ ಗೆ ಸಿದ್ಧವಾಗಿದೆ.
ಇದಲ್ಲದೆ ವಿಜಯ ರಾಘವೇಂದ್ರ ನಟನೆಯ ಎಫ್ಐಆರ್, ವಿಚಾರಣೆ ಸಿನಿಮಾಗಳಿಗೆ ಬಂಡವಾಳ ಹಾಕುವ ಮೂಲಕ ನಿರ್ಮಾಣದ ಜೊತೆಗೆ ಪಾತ್ರವನ್ನು ನಿರ್ವಹಿಸಿದ್ದಾರೆ. ಈಗ ಅವರು ಬಾಲಿವುಡ್ ನಲ್ಲಿ ಸಿನಿಮಾ ಮಾಡುವ ನಿಟ್ಟಿನಲ್ಲಿ ರಾಯಲ್ ಮೂವೀಸ್ ಬೆಂಗಳೂರು ಹೆಸರಿನಲ್ಲಿ ಬ್ಯಾನರ್ ಮಾಡಿದ್ದಾರೆ. ಹಿಂದಿ ಸಿನಿಮಾ ಮಾಡುವ ತಯಾರಿಯಲ್ಲಿ ನಿರತರಾಗಿದ್ದಾರೆ.
ಸಿನಿಮಾ ರಂಗ ಕೈಬೀಸಿ ಕರೆಯಿತು. ಈ ರಂಗದ ಮೇಲೆ ಪ್ರೀತಿ ಇದ್ದ ಕಾರಣ ಸಿನಿಮಾ ಮಾಡಲು ಮುಂದಾದೆ ಎಂದು ಮನೋಜ್ ಗೌಡ ಹೇಳಿದ್ದಾರೆ.
ಚಿತ್ರ ನಿರ್ಮಾಣದ ಜೊತೆಗೆ ಸಿನಿಮಾ ರಂಗದಲ್ಲಿ ನೆಲೆಯೂರಲು ಮನೋಜ್ ಗೌಡ ಅವರು ನಟನೆಯಲ್ಲಿ ತರಬೇತಿಯನ್ನು ಕೂಡ ಪಡೆದಿದ್ದಾರೆ.
____
Be the first to comment