Laal Singh Chaddha’ : ಐಪಿಎಲ್​ ಫೈನಲ್ ನಂದು ‘ಲಾಲ್​ ಸಿಂಗ್​ ಚಡ್ಡಾ’ ಟ್ರೈಲರ್ ?

ಅಮಿರ್​ ಖಾನ್​ ಅವರ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ತಂಡ ಐಪಿಎಲ್​ ಫೈನಲ್ ನಂದು ‘ಸ್ಟಾರ್​ ಸ್ಪೋರ್ಟ್ಸ್​’ ವಾಹಿನಿ ಮೂಲಕ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲು ಮುಂದಾಗಿದೆ.

ಲಾಲ್​ ಸಿಂಗ್​ ಚಡ್ಡಾ ಆಗಸ್ಟ್​ 11ರಂದು ಬಿಡುಗಡೆ ಆಗಲಿದೆ. ಈಗಾಗಲೇ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಟ್ರೇಲರ್​ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕ್ರೀಡೆಗೆ ಮೀಸಲಾಗಿರುವ ಹಾಗೂ ಪ್ರಸ್ತುತ ಐಪಿಎಲ್​ ಪ್ರಸಾರ ಮಾಡುತ್ತಿರುವ ‘ಸ್ಟಾರ್​ ಸ್ಪೋರ್ಟ್ಸ್​’ ವಾಹಿನಿ ಮೂಲಕ ಚಿತ್ರದ ಟ್ರೇಲರ್​ ಬಿಡುಗಡೆ ಮಾಡುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಐಪಿಎಲ್​ ಫೈನಲ್​ ದಿನ ಹೆಚ್ಚು ಜನರು ಟಿವಿ ಮುಂದೆ ಕುಳಿತಿರುತ್ತಾರೆ. ಈ ಸಂದರ್ಭದಲ್ಲಿ ಮ್ಯಾಚ್​ ಮಧ್ಯೆ ಟ್ರೇಲರ್​ ಪ್ರಸಾರ ಮಾಡಿದರೆ ಹೆಚ್ಚು ಜನರನ್ನು ತಲುಪಬಹುದು ಎನ್ನುವುದು ‘ಲಾಲ್​ ಸಿಂಗ್​ ಚಡ್ಡಾ’ ತಂಡದ ಪ್ಲ್ಯಾನ್​. ಸಿನಿಮಾ ಪ್ರಚಾರ ಮತ್ತು ಮಾರ್ಕೆಟಿಂಗ್​ ತಂತ್ರದಲ್ಲಿ ಇದು ಹೊಸ ಐಡಿಯಾ ಎಂದು ಬಣ್ಣಿಸಲಾಗುತ್ತಿದೆ. ಈ ಸುದ್ದಿಯ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಯಾವುದೇ ಹೇಳಿಕೆ ನೀಡಿಲ್ಲ.
ಹಾಲಿವುಡ್​ನಲ್ಲಿ ಟಾಮ್​ ಹ್ಯಾಂಕ್ಸ್​ ನಟಿಸಿದ ‘ಫಾರೆಸ್ಟ್​ ಗಂಪ್​’ ಚಿತ್ರದ ಹಿಂದಿ ರಿಮೇಕ್​ ‘ಲಾಲ್​ ಸಿಂಗ್​ ಚಡ್ಡಾ’. ಈ ಸಿನಿಮಾದಲ್ಲಿ ಆಮಿರ್​ ಖಾನ್​ಗೆ ಜೋಡಿಯಾಗಿ ಕರೀನಾ ಕಪೂರ್​ ಖಾನ್​ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ನಾಗ ಚೈತನ್ಯ ಅಭಿನಯಿಸಿದ್ದಾರೆ. ಅನೇಕ ಐತಿಹಾಸಿಕ ಘಟನೆಗಳಿಗೆ ಅನುಗುಣವಾಗಿ ಈ ಕಥೆ ಸಾಗುತ್ತದೆ. ಈಗಾಗಲೇ ‘ಲಾಲ್​ ಸಿಂಗ್​ ಚಡ್ಡಾ’ ನಿರೀಕ್ಷೆ ಹುಟ್ಟು ಹಾಕಿದೆ.
ಕೆಲ ದಿನಗಳ ಹಿಂದೆ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಎರಡು ಲಿರಿಕಲ್​ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಈಗ ಟ್ರೇಲರ್​ ಹೇಗಿರಲಿದೆ ಎನ್ನುವ ಕೌತುಕ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಆಮಿರ್​ ಖಾನ್​ ಅವರು ಹತ್ತು ಹಲವು ಗೆಟಪ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಸೀಕ್ರೆಟ್​ ಸೂಪರ್​ ಸ್ಟಾರ್​’ ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿದ್ದ ಅದ್ವೈತ್​ ಚಂದನ್​ ಅವರು ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!