ನೋಡೋಕೆ ಹಾಟ್ ಬ್ಯೂಟಿ.ಕನ್ನಡದಲ್ಲಿ ಒಂದಿಷ್ಟು ಸಿನಿಮಾ ಮಾಡಿ,ನಂತರ ಬಾಲಿವುಡ್ ಕದ ತಟ್ಟಿದ್ದ ಈ ಬೆಡಗಿ ಕನ್ನಡಕ್ಕೆ ಮತ್ತೆ ಬರ್ತಿದ್ದಾರೆ.ಹಾಗಿದ್ರೆ ಯಾರು ಆ ಕ್ಯೂಟ್ ಲಡ್ಕಿ ಅಂತೀರಾ?
ಸ್ಯಾಂಡಲ್ ವುಡ್ ನಲ್ಲಿ “ಮಿಂಚಿನ ಓಟ” ಶುರುಮಾಡಿ,”ಶೃಂಗಾರ” ಮಾಡ್ಕೊಂಡು,”ಕಲ್ಪನಾ” ಗೂ ಬಣ್ಣ ಹಚ್ಚಿ,”ಸ್ನೇಹನಾ ಪ್ರೀತೀನಾ” ಅಂತ “ಅಟ್ಟಹಾಸ” ಮಾಡಿದವರು ಕನ್ನಡದ ಬ್ಯೂಟಿ..ಲಕ್ಷ್ಮಿ ರೈ .
ಎಸ್ ನಟಿ ಲಕ್ಷ್ಮಿ ರೈ ಕನ್ನಡ ಸಿನಿಮಾ ಮಾಡಿ ಬಹಳ ವರ್ಷಗಳೆ ಆಗಿತ್ತು. ಜೊತೆಗೆ ಬಾಲಿವುಡ್ ಬಾಗಿಲು ತಟ್ಟಿದ್ದ ಲಕ್ಷ್ಮಿ ಮತ್ತೆ ಕನ್ನಡ ಸಿನಿಮಾ ಮಾಡುತ್ತಾರ ಇಲ್ವಾ ಎನ್ನುವ ಕುತೂಹಲ ಕೂಡ ಇತ್ತು. ಆದರೆ, ಈಗ ಮತ್ತೆ ಸ್ಯಾಂಡಲ್ ವುಡ್ ಕಡೆ ಲಕ್ಷ್ಮಿ ರೈ ಮುಖ ಮಾಡಿದ್ದಾರೆ.
ಲಾಂಗ್ ಗ್ಯಾಪ್ ನ ಬಳಿಕ ಲಕ್ಷ್ಮೀ ಝಾನ್ಸಿ ರಾಣಿಯಾಗಿ ಚಂದನವನಕ್ಕೆ ರೀ ಎಂಟ್ರಿ ಆಗ್ತಾ ಇದ್ದಾರೆ. ‘ಝಾನ್ಸಿ’ ಎಂಬ ಹೆಸರಿನ ಹೊಸ ಸಿನಿಮಾ ಕನ್ನಡದಲ್ಲಿ ಬರುತ್ತಿದ್ದು, ಈ ಚಿತ್ರದ ನಾಯಕಿ ಪಾತ್ರದಲ್ಲಿ ಲಕ್ಷ್ಮಿ ರೈ ನಟಿಸಲಿದ್ದಾರೆ. ಚಿತ್ರದ ಕಥೆ ಇಷ್ಟ ಆಗಿರುವ ಕಾರಣ ಸಿನಿಮಾ ಮಾಡಲು ಅವರು ಒಪ್ಪಿಕೊಂಡಿದ್ದಾರಂತೆ.
‘ಝಾನ್ಸಿ’ ಹೆಸರು ಕೇಳಿತ್ತಿದ್ದ ಹಾಗೆ ಇದು ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಅವರ ಜೀವನ ಚರಿತ್ರೆಯ ಸಿನಿಮಾ ಎಂಬ ಪ್ರಶ್ನೆ ಮೂಡುತ್ತದೆ. ಆದರೆ, ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಚಿತ್ರವನ್ನು ಈ ಹಿಂದೆ ಕೋಮಲ್ ನಟನೆಯ ‘ಮರ್ಯಾದ ರಾಮಣ್ಣ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಗುರುಪ್ರಸಾದ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಾ ಇದ್ದಾರೆ.ಅದೇನೇ ಇರಲಿ ಸದ್ಯ ಮಲೆಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯೂಸಿ ಯಾಗಿರುವ ಲಕ್ಷ್ಮೀ ರೈ ಕನ್ನಡಕ್ಕೆ ಮತ್ತೆ ಕಮ್ ಬ್ಯಾಕ್ ಆಗಿರೋದು ಅಭಿಮಾನಿಗಳಿಗೆ ಖುಷಿತಂದಿರೋದಂತೂ ನಿಜ.
Be the first to comment