ಸಮಂತಾ ಅವರ ಬೋಲ್ಡ್ ಸೀನ್ ನಟನೆಯ ನಿರ್ಧಾರವೇ ನಾಗಚೈತನ್ಯ ಜೊತೆಗಿನ ವಿಚ್ಛೇದನಕ್ಕೆ ಕಾರಣ ಆಗಿದೆ ಎನ್ನುವ ಮಾತು ಕೇಳಿ ಬಂದಿದೆ.
ಫ್ಯಾಮಿಲಿ ಮ್ಯಾನ್ 2 ಸೀರೀಸ್ನಲ್ಲಿ ಸಮಂತಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೇ ವಿಚ್ಛೇದನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಸೀರೀಸ್ ನಟನೆ ಪತಿಯ ಮನೆಯವರಿಗೆ ದೊಡ್ಡ ಶಾಕ್ ನೀಡಿತ್ತು ಎಂದು ಹೇಳಲಾಗಿದೆ. ನಾಗಚೈತನ್ಯ ಅವರು ಸಮಂತಾ ಸೆಸೆಕ್ಸ್ ಸೀನ್ ಕಂಡು ಶಾಕ್ ಆಗಿದ್ದರು. ತನ್ನ ಪತ್ನಿಯನ್ನು ಈ ರೀತಿಯ ದೃಶ್ಯಗಳಲ್ಲಿ ನೋಡುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದು ನಾಗಚೈತನ್ಯ ತನ್ನ ಕುಟುಂಬಸ್ಥರ ಮುಂದೆ ಹೇಳಿಕೊಂಡಿದ್ದರು ಎನ್ನುವ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಫ್ಯಾಮಿಲಿ ಮ್ಯಾನ್ 2 ಹಿಟ್ ಆದ ಸೀರೀಸ್ ಆಗಿದ್ದು, ಈ ಸೀರೀಸ್ನಲ್ಲಿ ಸಮಂತಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಇದು ನಾಗ ಚೈತನ್ಯ ಮಾತ್ರವಲ್ಲದೇ, ನಾಗಾರ್ಜುನ ಅಕ್ಕಿನೇನಿ ಮತ್ತು ಕುಟುಂಬದ ಸದಸ್ಯರಿಗೆ ಇರುಸು-ಮುರುಸು ಉಂಟು ಮಾಡಿತ್ತು. ಕುಟುಂಬದವರಿಗೆ ಸಮಂತಾ ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯ, ಐಟಂ ಸಾಂಗ್‌ಗಳನ್ನು ಮಾಡುವುದು ಇಷ್ಟವಿರಲಿಲ್ಲ. ಮದುವೆ ನಂತರ ಈ ರೀತಿಯ ಪಾತ್ರಗಳಲ್ಲಿ ನಟಿಸುವುದು ಬೇಡ ಎಂದು ಸಮಂತಾಗೆ ಹೇಳಿದ್ದರು ಎನ್ನುವ ಮಾತು ಕೇಳಿ ಬಂದಿದೆ.
ಮದುವೆ ನಂತರ ಬೋಲ್ಡ್ ದೃಶ್ಯದಲ್ಲಿ ನಟಿಸುವುದಿಲ್ಲ ಎಂದ ಸಮಂತಾ, ಫ್ಯಾಮಿಲಿ ಮ್ಯಾನ್ 2 ಸೀರೀಸ್ನಲ್ಲಿ ನಟಿಸಿದ್ದರು. ಸಮಂತಾ ಅವರ ಸೆಕ್ಸ್ ಸೀನ್ ಕಂಡು ನಾಗಚೈತನ್ಯಗೆ ಆಘಾತ ಆಗಿತ್ತು ಎಂದು ಹೇಳಲಾಗಿದೆ.
ಡಿವೋರ್ಸ್ ಬಳಿಕ ಹಲವು ಸಿನಿಮಾವನ್ನು ಸಮಂತಾ ಒಪ್ಪಿಕೊಂಡರು. ಪುಷ್ಪ ಸಿನಿಮಾದಲ್ಲಿ ಮೊದಲ ಬಾರಿಗೆ ಐಟಂ ಸಾಂಗ್ವೊಂದರಲ್ಲಿ ಸಮಂತಾ ಬೋಲ್ಡ್ ಆಗಿ ಕಾಣಿಸಿಕೊಂಡು ನಾಗಚೈತನ್ಯಗೆ ಟಾಂಗ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಟಾಲಿವುಡ್ ಕ್ಯೂಟ್ ಕಪಲ್ ಈಗ ಬೇರ್ಪಟ್ಟರೂ, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಚ್ಛೇದನಕ್ಕೆ ಕಾರಣವನ್ನು ವಿವರಿಸುತ್ತಿದ್ದಾರೆ.
____







Be the first to comment