ಮೊದಲ ಹಂತದ ಚಿತ್ರೀಕರಣ ಮುಗಿಸಿದ “ಬ್ಲಡ್ ಹ್ಯಾಂಡ್”

ಆರ್.ಆರ್. ಪ್ರೊಡಕ್ಷನ್ಸ್ ಲಾಂಛನದಲ್ಲಿ ಭಾರತಿ.ಕೆ., ಓಂಕಾರ ಶ್ರೀನಿವಾಸನ್, ವಿಜಯ್ ಬಾಬು, ಕೂಡಿ ನಿರ್ಮಿಸುತ್ತಿರುವ ‘ಬ್ಲಡ್ ಹ್ಯಾಂಡ್” ಚಿತ್ರದ ಚಿತ್ರೀಕರಣ ನಗರದ ಸುತ್ತಮುತ್ತ ನಡೆದು ಪ್ರಥಮ ಹಂತ ಪೂರೈಸಿದೆ.

ಮುಂದಿನ ಭಾಗದ ಚಿತ್ರೀಕರಣ ಕನಕಪುರ, ರಾಮನಗರ, ಚೆನ್ನಪಟ್ಟಣ, ಹಾಗೂ ನೆಲಮಂಗಲದಲ್ಲಿ ನಡೆಯಲಿದೆ. ನಿರ್ದೇಶನ – ಆದಿ ಜೆ.ಕೆ, ಛಾಯಾಗ್ರಹಣ – ಬಿ ಚಂದ್ರು, ಸಂಗೀತ – ಸತೀಶ್ ಬಾಬು, ಸಂಕಲನ – ಶ್ರೀನಿವಾಸ ಬಾಬು , ಸಾಹಸ-ವಿಕ್ರಂ, ನೃತ್ಯ-ಮನು, ಪ್ರೀತಿ-ಕ್ರೌರ್ಯಗಳ ನಡುವೆ ನಡೆಯುವ ಈ ಚಿತ್ರದಲ್ಲಿ ಸುಮಿತ್, ಶೃತಿ, ಅಮಿತ್ ರಾವ್, ರೋಹಿತ್, ಶಿಲ್ಪ, ಮೂರ್ತಿ, ಹೆಚ್.ಎಂ.ಟಿ. ವಿಜಿ, ಮೀನಾಕ್ಷಿ ಅನುರಾಧ, ಸುನಂದ, ಮಂಜುಳ ರೆಡ್ಡಿ, ಓಂಕಾರ ಶ್ರೀ, ಸಿಂಛನ, ಆಲಿಶ, ಗಿರೀಶ್, ಅನುಪಮ, ರಾಜೇಶ್, ಶಿಲ್ಪ, ಮುಂತಾದವರಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!