‘ಬ್ಲಿಂಕ್’ ಸಿನಿಮಾ ಮೂಲಕ ನಿರ್ದೇಶಕ ಶ್ರೀನಿಧಿ ಮತ್ತು ತಂಡ ಅಪರೂಪದ ಕಥಾ ಶೈಲಿ ಮತ್ತು ತಂತ್ರಜ್ಞಾನ ತಂತ್ರಜ್ಞಾನದ ಬಳಕೆಯಿಂದ ಗಮನ ಸೆಳೆದಿದ್ದ ಬ್ಲಿಂಕ್ ತಂಡ ಇದೀಗ ಮತ್ತೊಂದು ಸಾಹಸಿಕ ಪ್ರಯೋಗದೊಂದಿಗೆ ಹಿಂದಿರುಗಿದೆ. ಹೊಸದಾಗಿ ಅನಾವರಣಗೊಂಡಿರುವ ಹಾರರ್ ಥ್ರಿಲ್ಲರ್ “ವೀಡಿಯೋ” ಸಿನಿಮಾದ ಮೊದಲ ಟೀಸರ್ ಮತ್ತು ಥೀಮ್ ಮ್ಯೂಸಿಕ್ ಇದೀಗ ಬಿಡುಗಡೆಯಾಗಿದೆ.
ಈ ಚಿತ್ರದಲ್ಲಿ ‘ದಿಯಾ’ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಮತ್ತು ‘ಬ್ಲಿಂಕ್’ ಮೂಲಕ ಹೆಸರು ಗಳಿಸಿದ ನಿರ್ದೇಶಕಿ ಶ್ರೀನಿಧಿ ಕೈಜೋಡಿಸಿದ್ದಾರೆ. ಈ ಹೊಸ ಪ್ರಯೋಗಕ್ಕೆ ‘ಧೀ’ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ದೀಕ್ಷಿತ್ ಶೆಟ್ಟಿ ಚೊಚ್ಚಲ ನಿರ್ಮಾಪಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಟೀಸರ್ ಅನಾವರಣ ಕಾರ್ಯಕ್ರಮವನ್ನು ಯುವ ನಿರ್ದೇಶಕರು ಮತ್ತು ನಟಿಯರು ಸೇರಿ ಶ್ರೇಷ್ಠವಾಗಿ ನಡೆಸಿದ್ದು, ವಿಶೇಷವೆಂದರೆ, ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಚಿತ್ರತಂಡ “ದೆವ್ವದ ಹಾಡು” ಹಾಡುವ ಮೂಲಕ ಭೀತಿಯ ವಾತಾವರಣಕ್ಕೆ ಚಾಲನೆ ನೀಡಿ ಗಮನ ಸೆಳೆಯಿತು.
ಈ ಚಿತ್ರದಲ್ಲಿ ಭರತ್, ಜೀವನ್ ಶಿವಕುಮಾರ್, ತೇಜೇಶ್, ಪ್ರಿಯಾ ಜೆ ಆಚಾರ್ ಮತ್ತು ನಲ್ಮೇ ನಾಚಿಯಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಸನ್ನ ಕುಮಾರ್ ಈ ಚಿತ್ರಕ್ಕೆ ಭೀತಿಭರಿತ ಸಂಗೀತ ನೀಡಿದ್ದು, ಛಾಯಾಗ್ರಹಣದ ಜವಾಬ್ದಾರಿಯನ್ನು ಅವಿನಾಶ್ ಶಾಸ್ತ್ರಿ ನಿರ್ವಹಿಸಿದ್ದಾರೆ. ಖ್ಯಾತ ವಸ್ತ್ರ ವಿನ್ಯಾಸಕಾರ ಭರತ್ ಸಾಗರ್ ಕಾರ್ಯಕಾರಿ ನಿರ್ಮಾಪಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ, ಇನ್ನು ಮುಂದಿನ ದಿನಗಳಲ್ಲಿ ಚಿತ್ರೀಕರಣ ಕಾರ್ಯಾ ಆರಂಭಿಸಲಿದೆ. ಈ ವರ್ಷವೇ ಚಿತ್ರ ತೆರೆಗೆ ಬರಲಿದ್ದು, ಕನ್ನಡ ಚಿತ್ರರಂಗದ ಹಾರರ್ ಪ್ರೇಮಿಗಳಿಗೆ ಹೊಸ ಅನುಭವ ಒದಗಿಸಲಿದೆ ಎನ್ನುವುದು ನಿರೀಕ್ಷೆ ಇದೆ.
“ವೀಡಿಯೋ” ಎಂಬ ಈ ವಿನೂತನ ಹಾರರ್ ಪ್ರಯೋಗ, ಬ್ಲಿಂಕ್ ನಂತರದ ತಂಡದ ಮತ್ತೊಂದು ಕ್ರಿಯೇಟಿವ್ ಹೆಜ್ಜೆ ಆಗಿದ್ದು, ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲ ಕೆರಳಿಸಿದೆ.

Be the first to comment