ಸಿನಿಮಾ ಮಾಡ್ಬೇಕು ಅನ್ನೋ ಕನಸೊತ್ತ ಹುಡುಗ್ರು ಏನೆ ಆದ್ರು, ಎಷ್ಟೇ ಕಷ್ಟ ಆದ್ರು ಸಿನಿಮಾ ಮಾಡಿಯೇ ತೀರ್ತಾರೆ. ಡಾಕ್ಟರ್, ಇಂಜಿನಿಯರಿಂಗ್ ದೊಡ್ಡ ದೊಡ್ಡ ಡಿಗ್ರಿ ಓದಿದೋರು ಆ ಕೆಲಸ ಬಿಟ್ಟು ಸಿನಿಮಾ ಫಿಲ್ಡ್ ಗೆ ಬರ್ತಾರೆ. ಅಂತವರಲ್ಲಿ ಒಬ್ಬ ಬ್ಲಾಂಕ್ ಸಿನಿಮಾದ ಯುವ ಡೈರೆಕ್ಟರ್ ಸುಹಾಸ್
ಕಳೆದ ವರ್ಷವೇ ಇಂಜಿನಿಯರಿಂಗ್ ಮುಗಿಸಿದ ಈ ಮೈಸೂರು ಹುಡ್ಗ ಸುಹಾಸ್ ಈಗ ಸಿನಿಮಾ ಫಿಲ್ಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಫ್ರೆಂಡ್ಸ್ ಸಹಾಯದಿಂದ ಬ್ಲಾಂಕ್ ಅನ್ನೋ ಸಿನಿಮಾ ಶುರು ಮಾಡಿದ್ದ ಸುಹಾಸ್ ಈಗ ರಿಲೀಸ್ ಹಂತಕ್ಕೆ ಬಂದಿದ್ದಾರೆ. ಡ್ರಗ್ಸ್ ಗೆ ಅಡಿಟ್ ಆಗಿರೋ ಯುವಕರ ಕುರಿತು, ಕನಸು ಹಾಗೂ ನನಸಿನ ಜೀವನದ ನಡುವಿನ ಅಂಶಗಳನ್ನಿಟ್ಕೊಂಡು ಈ ಸಿನಿಮಾ ಮಾಡಿದ್ದಾರೆ ಈ ಯುವ ನಿರ್ದೇಶಕ
ಇನ್ನು ಈ ಚಿತ್ರದಲ್ಲಿ ಸ್ಯಾಂಡಲ್ವುಡ್ ಚೆಲುವೆ ಕೃಷಿ ತಪಂದಾ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಪೂರ್ಣಚಂದ್ರ ಮೈಸೂರು, ಭರತ್ ಸೇರಿದಂತೆ ಹೊಸಬರೇ ನಟಿಸಿದ್ದಾರೆ. ಇನ್ನು ಕೆ.ಜಿ.ಎಫ್ ಖ್ಯಾತಿಯ ಗರುಡ ರಾಮ್ ಚಿತ್ರಕ್ಕೆ ಹಿನ್ನಲೆ ಧ್ವನಿ ಕೊಟ್ಟಿದ್ದು, ಹಾಡೊಂದನ್ನೂ ಹಾಡಿ ಚಿತ್ರತಂಡಕ್ಕೆ ಸಾತ್ ಕೊಟ್ಟಿದ್ದಾರೆ. ನಿನ್ನೆಯಷ್ಟೇ ಚಿತ್ರತಂಡ ತಮ್ಮ ಬ್ಲಾಂಕ್ ಟೀಸರ್ ರಿಲೀಸ್ ಮಾಡಿದ್ದು, ಸಸ್ಪೆನ್ಸ್, ಥ್ರಿಲ್ಲರ್ ಕಥೆಯ ಬ್ಲಾಂಕ್ ಟೀಸರ್ ನಲ್ಲಿಯೇ ತನ್ನ ವಿಭಿನ್ನತೆ ತೋರಿಸ್ತಿದೆ.
ಇನ್ನು ಈ ಚಿತ್ರಕ್ಕೆ ಬಂಡವಾಳ ಹಾಕಿ ಯುವ ಟೀಂಗೆ ಜೊತೆಯಾಗಿ ನಿರ್ಮಾಪಕ ಎನ್ ಪಿ ಮಂಜುನಾಥ್ ನಿಂತಿದ್ದು, ಸದ್ಯ ಟೀಸರ್ ಬಿಡುಗಡೆ ಮಾಡಿರೋ ಚಿತ್ರತಂಡ ಸದ್ಯದಲ್ಲೇ ಟ್ರೈಲರ್ ಮೂಲಕ ನಿಮ್ಮ ಮುಂದೆ ಬರ್ತೀವಿ ಅನ್ನುತ್ತೆ.

Be the first to comment