ಕನಸೂ ಮನಸೂ ‘ಬ್ಲಾಂಕ್’
‘ಲುಸಿಡ್ ಡ್ರೀಮ್ಸ್’ ಕಂಟೆಂಟ್ ಅನ್ನು ಬೇಸ್ ಆಗಿಟ್ಟುಕೊಂಡು ಹೊಸ ಕನಸು ಹೊತ್ತ ಚಿತ್ರತಂಡವೊಂದು, ‘ಬ್ಲಾಂಕ್’ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದೆ. ನವ ನಿರ್ದೇಶಕ ಎಸ್.ಜೈ ಆ್ಯಕ್ಷನ್ ಕಟ್ ಹೇಳುತ್ತಿರುವ ಬ್ಲಾಂಕ್ ಸಿನಿಮಾದಲ್ಲಿ ಡ್ರೀಮ್ ಮತ್ತು ರಿಯಾಲಿಟಿ ನಡುವೆ ನಡೆಯುವ ಕಥೆ ಇದೆ. ಡ್ರೀಮ್&ರಿಯಾಲಿಟೀ ಅಂದ ತಕ್ಷಣ ‘ಲುಸಿಯಾ’ ಚಿತ್ರ ನೆನೆಪಿಗೆ ಬಂದರೆ ತಪ್ಪಿಲ್ಲ. ಬಿಕಾಸ್, ಸುಹಾಸ್ ಕೂಡ ಮಾಡಲು ಹೊರಟಿರೋದು ಲುಸಿಯಾದಂತೆಯೇ ಒಂದು ಪಕ್ಕಾ ಎಕ್ಸ್ಪೆರಿಮೆಂಟಲ್ ಸಿನಿಮಾನೇ. ಎಂಜಿನಿಯರಿಂಗ್ ಮುಗಿಸಿದ ಕೂಡಲೇ ಮುಂದೇನು ಮಾಡೋದು ಎಂದು ಬ್ಲಾಂಕ್ ಆಗದೇ ‘ಬ್ಲಾಂಕ್’ ಚಿತ್ರ ಮಾಡಿದ್ದಾರೆ ಎಸ್.ಜೈ.
ಪೂರ್ಣಚಂದ್ರ ಮೈಸೂರು, ಕೃಷಿ ತಾಪಂಡ, ಭರತ್ ನಟಿಸುತ್ತಿರುವ ಈ ಚಿತ್ರದ ಕಥೆಯೇ ಬಹಳ ವಿಶೇಷವಾಗಿದೆ ಎಂದು ಚಿತ್ರದ ಕಂಟೆಂಟ್ನಿಂದಲೇ ಅರ್ಥವಾಗುತ್ತದೆ. ವಿಭಿನ್ನ ಕಥೆಗೆ ಹೊಸ ರೀತಿಯ ಸ್ಕ್ರೀನ್ಪ್ಲೇ ಮಾಡಿಕೊಂಡಿದ್ದ ನಿರ್ದೇಶಕರು ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ಪ್ರೊಡಕ್ಷನ್ನಲ್ಲಿ ತೊಡಗಿಸಿಕೊಂಡು, ಚಿತ್ರವನ್ನು ಜನವರಿಯಲ್ಲಿ ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಇನ್ನು ಬ್ಲಾಂಕ್ಗೆ ಹಣಹೂಡುತ್ತಿರುವವರು ಎನ್.ಪಿ.ಮಂಜುನಾಥ್ ಪ್ರಸನ್ನರವರು.
ಚಿತ್ರದ ಕಂಟೆಂಟ್ನಿಂದ ಥ್ರಿಲ್ ಆದ ಮಂಜುನಾಥ್ ಅವರು ಹೊಸಬರ ಆಸೆಗೆ ಒತ್ತಾಸೆಯಾಗಿ ನಿಂತಿದ್ದಾರೆ. ಸಿನಿಮಾದ ಕಥೆಯನ್ನೇ ಹಿರೋ ಆಗಿಟ್ಟುಕೊಂಡು ಎಂಟ್ರಿ ಕೊಡುತ್ತಿರುವ ಎಸ್.ಜೈ ಇಗಾಗಲೇ ಸಾಕಷ್ಟು ಕಿರುಚಿತ್ರಗಳನ್ನು ಡೈರೆಕ್ಟ್ ಮಾಡಿದ್ದಾರೆ. ಇವರ ಕಿರು ಚಿತ್ರಗಳು ಸಾಕಷ್ಟು ಪ್ರತಿಷ್ಟಿತ ಫಿಲ್ಮ್ ಫೆಸ್ಟ್ ವೆಲ್ಲ್ ನಲ್ಲಿ ಪ್ರದರ್ಶನಗೊಂಡು ಶ್ಲಾಘನೆಯನ್ನು ಪಡೆದುಕೊಂಡಿದೆ.
ಚಿತ್ರರಂಗ ನಿಂತ ನೀರಲ್ಲ ಅನ್ನೋದು ಹೊಸ ಹೊಸ ಪ್ರತಿಭಾವಂತ ನಿರ್ದೇಶಕರು ಎಂಟ್ರಿ ಕೊಟ್ಟಾಗ ಪ್ರೂವ್ ಆಗುತ್ತಲೇ ಇದೆ. ಈಗ ಸಾಕಷ್ಟು ಡೆಡಿಕೇಶನ್ ಜೊತೆಗೆ ಕಂಟೆಂಟ್&ಕ್ವಾಲಿಟೀ ಚಿತ್ರದೊಂದಿಗೆ ಬರುತ್ತಿರುವ ಎಸ್.ಜೈ ಕೂಡ ಈ ಸಾಲಿಗೆ ಸೇರುತ್ತಾರಾ.. ಕಾದು ನೋಡಬೇಕು.
@ಬಿಸಿನಿಮಾಸ್

Pingback: https://www.paintingandplowing.com
Pingback: online cvv shop