ಸಸ್ಪೆನ್ಸ್, ಕ್ರೈಮ್, ಥ್ರಿಲ್ಲರ್ ಶೈಲಿಯ ‘ಬ್ಲ್ಯಾಕ್ ಶೀಪ್’ ಸಿನಿಮಾ ಸದ್ಯದಲ್ಲೇ ತೆರೆ ಕಾಣಲಿದೆ.
ಈ ಚಿತ್ರದಲ್ಲಿ ವಿಶಾಲ್ ಕಿರಣ್ ಅವರು ಹೀರೋ ಆಗಿ ನಟಿಸಿದ್ದಾರೆ. ಚಿತ್ರಕ್ಕೆ ಜೀವನ್ ಹಳ್ಳಿಕಾರ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅಶ್ವಿನಿ ಗುರುಚರಣ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
ಈ ಸಿನಿಮಾದಲ್ಲಿ ಮಾಫಿಯಾ ಕಹಾನಿ ಇದೆ. ಈ ಕಥೆಯಲ್ಲಿ ಹೀರೋ ವಿಶಾಲ್ ಕಿರಣ್ ಅವರು ಸಿಬಿಐ ಆಫೀಸರ್ ಪಾತ್ರ ಮಾಡಿದ್ದಾರೆ. ಸಿನಿಮಾದಲ್ಲಿ ಶಿವಾಂಗಿ ದಾವೆ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಸಿದ್ಲುಂಗು ಶ್ರೀಧರ್, ನಿಶಾ ಹೆಗಡೆ, ಕೃಷ್ಣ ಹೆಬ್ಬಾಳೆ, ಪುನೀತ್, ಸುಂದರ್ ವೀಣಾ, ದೀಪಿಕಾ ಅಡ್ತಲೆ ಮುಂತಾದ ಕಲಾವಿದರು ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ವಿಲನ್ ಆಗಿ ಪ್ರಶಾಂತ್ ವಿ. ಹರಿ ಅವರು ನಟಿಸಿದ್ದಾರೆ.
69 ದಿನಗಳ ಕಾಲ ಬೆಂಗಳೂರು, ಮುಂಬೈ ಹಾಗೂ ಮಂಗಳೂರಿನಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಸಿನಿಮಾಗೆ ದೇವು ಅವರು ಛಾಯಾಗ್ರಹಣ ಮಾಡಿದ್ದಾರೆ. ಸಿದ್ದಾರ್ಥ್ ಕಾಮತ್ ಸಂಗೀತ. ಎಸ್. ಆಕಾಶ್ ಮಹೇಂದ್ರಕರ್ ಸಂಕಲನ, ಅವತಾರ್ ಆದಿತ್ಯ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.
—-





Be the first to comment