ಸಿನಿಮಾ ವಿಮರ್ಶೆ : ಬ್ಲಾಕ್&ವೈಟ್ ‘ಕಾಮನ್’ಬಿಲ್ಲು!

ಕೆಲವೊಂದು ಅಪರೂಪದ ಚಿತ್ರಗಳನ್ನು ನೋಡುವುದೇ ಟಾರ್ಚರ್, ಅದರ ಬಗ್ಗೆ ವಿಮರ್ಶೆ ಬರಿಬೇಕು ಅನ್ನೋದು ಇನ್ನೂ ಟಾರ್ಚರ್. ಅಂತಹ ಅಪರೂಪದ ಚಿತ್ರಗಳ ಸಾಲಿಗೆ ಸೇರುವ ಚಿತ್ರ ‘ಮಳೆಬಿಲ್ಲು’! ಚಿತ್ರವನ್ನು ನಾಗರಾಜ್ ಹಿರಿಯೂರು ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಪ್ರೇಕ್ಷಕರೂ ಅವರೊಬ್ಬರೇ ಆಗಿದ್ದು ದುರಂತ.
ಸಿನಿ ಎಂಟರ್‍ ಪ್ರೈಸಸ್ ಲಾಂಛನದಲ್ಲಿ, ನಿಂಗಪ್ಪ ಎಲ್. ನಿರ್ಮಿಸಿರುವ ಮಳೆಬಿಲ್ಲು ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗದೆ. ‘ಹುಡುಗರ ಜೀವನ ಬಿಳಿ ಹಾಳೆ ಇದ್ದ ಹಾಗೆ, ಅವರ ಬದುಕಿನಲ್ಲಿ ಹುಡುಗಿಯೊಬ್ಬಳು ಬಂದಾಗ ಅವರ ಜೀವನದಲ್ಲಿ ಏಳು ಬಣ್ಣಗಳ ಸಮಾಗಮವಾಗಲಿದೆ’ ಎಂಬುದೇ ಚಿತ್ರದ ಒನ್‍ಲೈನ್ ಸ್ಟೋರಿ ಅಂದಿದ್ದರು ನಿರ್ದೇಶಕರು. ಚಿತ್ರ ನೋಡಿದರೆ ಬಣ್ಣಗಳ ಸಮಾಗವು ಇಲ್ಲ, ಎನೂ ಇಲ.. ಬರೀ ಬಿಳಿ ಹಾಳೆ!
ಹಾಗಿದ್ದರೆ ಚಿತ್ರ ಅಷ್ಟೊಂದು ಬೋರಿಂಗ್ ಆಗಿರೋದ್ದಿಕ್ಕೆ ಕಾರಣ ಏನು? ಚಿತ್ರದ ಕಂಟೆಂಟ್. ಲವ್ ಆಗೋದು.. ಆಮೇಲೆ ಇಂಟರ್‍ವಲ್ ಬ್ಲಾಕ್‍ನಲ್ಲಿ ಅವರ ಇನ್ನೊಂದು ಅಫೈರ್ ಬಗ್ಗೆ ಗೊತ್ತಾಗೋದು.. ಕ್ಲೈಮಾಕ್ಸ್‍ನಲ್ಲಿ ಸುಖಾಂತ್ಯವಾಗೋದು.. ಇಂತಹ ಎಷ್ಟು ಚಿತ್ರಗಳು ಬಂದು ಹೋಗಿಲ್ಲ. ಇರ್ಲಿಬಿಡಿ, ಕಂಟೆಂಟ್ ಅನ್ನು ನಾಗರಾಜ್ ಫ್ರೆಶ್ ನಿರೂಪಣೆಯೊಂದಿಗೆ ಪ್ರಸೆಂಟ್ ಮಾಡುವ ಪ್ರಯತ್ನವಾದರೂ ಮಾಡಿದ್ದಾರಾ? ಅದೂ ಇಲ್ಲ. ಚಿತ್ರನೋಡುವಾಗ, 2008ರಲ್ಲಿ ತೆಲುಗಿನಲ್ಲಿ ರಿಲೀಸ್ ಆಗಿ, ಅಟ್ಟರ್‍ಫ್ಲಾಪ್ ಆದ ಚಿತ್ರ ‘ರೈನ್‍ಬೋ’ ಚಿತ್ರ ನೆನೆಪಾದರೆ ಅದು ‘ಕಾಪಿ ಅಲ್ಲ, ಇನಸ್ಫೀರೇಶನ್’ ಅಂತಂದುಕೊಂಡು ಚಿತ್ರ ನೋಡಬೇಕು!
ಸೂರ್ಯ(ಶರತ್) ಎಲ್ಲಾ ಸಿನ್ಮಾಗಳಂತೆ ಕಾಲೇಜ್ ಹಿರೋ.. ಪರೋಪಕಾರಿ.. ಫುಲ್‍ಶೇವ್ ಸುಂದ್ರ. ಈ ಸುಂದ್ರನ ಹಾರ್ಟು ಮಿಡಿಯೋದು ಓನ್ಲೀ ಫೋರ್ ನಂದಿತ(ಸಂಜನಾ). ಯಾವಾಗ ಇವರಿಬ್ಬರ ರಿಲೇಶನ್‍ಶಿಪ್ ಎಂಗೇಜ್‍ಮೆಂಟ್ ಹಂತಕ್ಕೆ ಬರುತ್ತೋ, ನೋಡಗನ ನಿರೀಕ್ಷೆಯಂತೆಯೇ ಸೂರ್ಯ ಈ ಹಿಂದೆ ಇನ್ನೊಂದು ‘ಲೇಡಿಗ್ರಹ’ದ ಸುತ್ತ ಸುತ್ತುತ್ತಿರುವುದು ನಂದಿಳಿಗೆ ಗೊತ್ತಾಗಿ ಬಿಡುತ್ತದೆ. ಇದರ ಜೊತೆಗೆ ಡೈರೆಕ್ಟರ್ ‘ಒಂದು ಟ್ವಿಸ್ಟ್ ಇರ್ಲಿ’ ಅಂತ, ಸೂರ್ಯನ ಚೈಲ್ಡ್‍ವುಡ್‍ಗೆ ಹೋಗಿ ಅಲ್ಲಿ ಆತನ ಮನದನ್ನೆ ಭಾರ್ಗವಿಯ ಅನುಮಾನಸ್ಪದ ಸಾವಿನ ಬಗ್ಗೆ ಹೇಳಲು ಹೊರಟು ಮೊದಲೇ ಬಾಯಿ ಆಕಳಿಸಿಕೊಂಡು ಸಿನ್ಮಾ ನೋಡುತ್ತಿದ್ದವರನ್ನು ಥೀಯೇಟರ್‍ನಿಂದ ಹೊರಗಡೆ ಹೋಗುವಂತೆ ಮಾಡಿದ್ದಾರೆ.
ಶರತ್&ಸಂಜನಾ ತೆರೆಯ ಮೇಲೆ ಪ್ರೀತಿಯಲ್ಲಿ ಬಿದ್ದಿದ್ದಾರೆ, ಅದರ ಜೊತೆಗೆ ಪಾತ್ರವೂ ಬಿದ್ದಿದೆ! ಡೈರೆಕ್ಟರ್ ಪ್ರೀತಿಯಲ್ಲಿ ಬೀಳುವುದಲ್ಲ ‘ಏಳುವುದು’ ಅನ್ನುವುದನ್ನು ಅರ್ಥಮಾಡಿಕೊಂಡಂತಿಲ್ಲ. ಲವ್‍ಸ್ಟೋರಿಯಲ್ಲಿ ಹೀರೋನಿಗೆ ಇದ್ದಕ್ಕಿದ್ದಂತೆ ಅಡರಿಕೊಳ್ಳುವ ಕನ್ನಡ ಪ್ರೇಮ ವರ್ಕ್‍ಔಟ್ ಆಗಿಲ್ಲ. ಬೇಸ್‍ವಾಯ್ಸ್‍ನಲ್ಲಿ ಪವರ್‍ಫುಲ್ ಡೈಲಾಗ್ ಹೊಡೆಯಲು ಟ್ರೈ ಮಾಡಿರುವ ಶರತ್ ವಾಯ್ಸ್ “……..’ ಬಂದಾಗ ಸೌಂಡು ಬರುತ್ತಾಲ್ಲಾ.. ಆ ರೀತಿ ಕೇಳಿಸುತ್ತದೆ.
ಇನ್ನು ‘ಮಳೆಬಿಲ್ಲು’ ಅನ್ನುವ ಟೈಟಲ್ ಚಿತ್ರಕ್ಕೆ ಪರ್‍ಫೆಕ್ಟ್ ಎಂಬುದನ್ನು ನಿರೂಪಿಸಲು, ನಾಗರಾಜ್ ಪ್ರತೀರೀಲ್‍ನಲ್ಲೂ ಒದ್ದಾಡಿದ್ದಾರೆ. ಅವರ ಒದ್ದಾಟಕ್ಕೆ ಪ್ರತಿಫಲ ಸಿಗೋದು ಡೌಟ್‍ಕೇಸ್!
ಸಿ. ನಾರಾಯಣ್ ಛಾಯಾಗ್ರಹಣ ‘ಗುಂಪಿನಲ್ಲಿ ಗೋವಿಂದ’ ಎಂಬಂತಿದೆ, ಸ್ಪೇಶಾಲಿಟಿ ಏನೂ ಇಲ್ಲ.  ನಾಗಾರಾಜ್ ಚಿತ್ರಕತೆಗೆ ಅಷ್ಟು ಸಾಕುಬಿಡಿ. ಆರ್.ಎಸ್. ಗಣೇಶ್ ನಾರಾಯಣ್ ಸಂಗೀತ ಇರೋದರಲ್ಲಿ ಬೆಟರ್. ಎಡಿಟರ್ ಸತೀಶ್ ಚಂದ್ರಯ್ಯ ಏನೂ ಎಡಿಟ್ ಮಾಡಿದ್ದರೋ, ಚಿತ್ರ ಆಮೆಗತಿಯಲ್ಲಿ ಸಾಗುತ್ತದೆ.
ಶರತ್&ನಂದಿತ ಹೊರತುಪಡಿಸಿ ಚಿತ್ರದಲ್ಲಿ, ನಯನಾ, ಕಿರ್ಲೋಸ್ಕರ್ ಸತ್ಯನಾರಾಯಣ್, ಶ್ರೀನಿವಾಸ ಪ್ರಭು, ಮೈಕೋ ನಾಗರಾಜ್, ಮಹದೇವ್, ಚಂದನ್, ಮೀಸೆ ಆಂಜನಪ್ಪ, ಕೃಷ್ಣಮೂರ್ತಿ, ಧಮಯಂತಿ ನಾಗರಾಜ್, ಡಿ.ಕೆ. ಯಶೋಧ, ರವಿತೇಜ, ಅರವನಹಳ್ಳಿ ಆನಂದ್, ಬಾಲಾಜಿ, ಹರ್ಷಿತಾ, ಪ್ರಜ್ವಲ್, ಸೌಮ್ಯಾ, ಡಾ. ನಾಗೇಶ್, ಸಾತ್ವಿಕ್, ಎಂ. ಭೂಪತಿ, ನಿಂಗರಾಜ್..ಹೀಗೆ ತಾರಾಗಣದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಷ್ಟೆಲ್ಲಾ ಕಲಾವಿದರು.. ನಿರ್ಮಾಪಕರ ದುಡ್ಡು.. ಎಲ್ಲವೂ ಇದ್ದುಕೊಂಡೂ ನಾಗಾರಾಜ್ ಅಂತಹ ನಿರ್ದೇಶಕರಿಗೆ ಯಾಕೆ ಒಂದು ‘ನೋಡೆಬಲ್’ ಸಿನ್ಮಾ ಮಾಡಕ್ಕಾಗಿಲ್ಲ? ಚಿತ್ರನೋಡಿ ಉತ್ತರ ಸಿಗುತ್ತೆ!
Be the first to comment

Leave a Reply

Your email address will not be published. Required fields are marked *

Translate »
error: Content is protected !!