ಇಂದಿನಿಂದ ಬೆಂಗಳೂರು ಕಿರು ಚಲನಚಿತ್ರೋತ್ಸವ

ಇಂದಿನಿಂದ ಬೆಂಗಳೂರು ಅಂತಾರಾಷ್ಟ್ರೀಯ ಕಿರು ಚಲನಚಿತ್ರೋತ್ಸವದ 12 ನೇ ಆವೃತ್ತಿಯನ್ನು ಆಯೋಜಿಸಲಾಗಿದೆ.

ಆಗಸ್ಟ್ 3 ರಿಂದ 14ರ ತನಕ ಚಲನಚಿತ್ರೋತ್ಸವ ನಡೆಯಲಿದೆ. ಈ ಬಾರಿ ಚಿತ್ರೋತ್ಸವದಲ್ಲಿ ಭಾಗವಹಿಸುವ ಎಲ್ಲಾ ಕಿರು ಚಿತ್ರಗಳನ್ನು ಥಿಯೇಟರ್ ಜೊತೆಗೆ ಓಟಿಟಿಯಲ್ಲಿಯೂ ನೋಡ ಬಹುದಾಗಿದೆ. ಆಗಸ್ಟ್ 11 ರಿಂದ 14 ರವರೆಗೆ ಸುಚಿತ್ರಾ ಮತ್ತು ಗೋಥೆ ಇನ್ಸ್ಟಿಟ್ಯೂಟ್ ಮ್ಯಾಕ್ಸ್ ಮುಲ್ಲರ್ ಭವನದ ಚಿತ್ರಮಂದಿರಗಳಲ್ಲಿ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿದೆ . ಸಿನಿಮಾಸಕ್ತರು www.bisff.in ಗೆ ಲಾಗಿನ್ ಆಗುವ ಮೂಲಕ ಎಲ್ಲಾ ವರ್ಗಗಳ ಕಿರುಚಿತ್ರಗಳನ್ನು ವೀಕ್ಷಿಸಬಹುದಾಗಿದೆ .

ಖ್ಯಾತ ನಿರ್ದೇಶಕ ದಿವಂಗತ ಸತ್ಯಜಿತ್ ರೇ ಅವರ ಶತಮಾನೋತ್ಸವದ ಪುಣ್ಯತಿಥಿಯ ಅಂಗವಾಗಿ ಈ ವರ್ಷದ ಚಲನಚಿತ್ರೋತ್ಸವವನ್ನು ಅವರಿಗೆ ಸಮರ್ಪಿಸಲಾಗಿದೆ . ಈ ವರ್ಷ ಒಮ್ಮೆ ಉತ್ಸವಕ್ಕೆ ನೋಂದಾಯಿಸಿದ ಚಿತ್ರಗಳನ್ನು 10 ದಿನಗಳಲ್ಲಿ ಯಾವಾಗ ಬೇಕಾದರೂ ವೀಕ್ಷಿಸಬಹುದು . ಪಥೇರ್ ಪಾಂಚಾಲಿಯ ಚಿತ್ರದ ಸ್ಮರಣೀಯ ಭಂಗಿಯನ್ನು ಚಿತ್ರಿಸುವ ಪೋಸ್ಟರ್ ನ್ನು ಬಿಡುಗಡೆ ಮಾಡುವ ಮೂಲಕ ಸತ್ಯಜಿತ್ ರೇ ಅವರಿಗೆ ಗೌರವ ಸಮರ್ಪಿಸಲಾಗುತ್ತಿದೆ .

ಈ ವರ್ಷ , BISFF ಗೆ 90 ದೇಶಗಳಿಂದ 3000 ಕ್ಕೂ ಹೆಚ್ಚು ಕಿರುಚಿತ್ರಗಳು ಬಂದಿವೆ. ಅವುಗಳಲ್ಲಿ ಶೇ .23 ರಷ್ಟು ಮಹಿಳಾ ಚಲನಚಿತ್ರ ನಿರ್ಮಾಪಕರು ಇರುವುದು ವಿಶೇಷ. ಉತ್ಸವದ ಪ್ರದರ್ಶನಕ್ಕೆ ಸುಮಾರು 250 ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.

ಈ ಕಿರುಚಿತ್ರೋತ್ಸವ ಯುವ ಮತ್ತು ಹವ್ಯಾಸಿ ಚಲನಚಿತ್ರ ನಿರ್ಮಾಪಕರಿಗೆ ಉತ್ತಮ ವೇದಿಕೆಯಾಗಿದೆ. ಇಲ್ಲಿ ಅವರು ತಮ್ಮ ಕಿರುಚಿತ್ರಗಳನ್ನು ಪ್ರದರ್ಶಿಸಿ ಸಿನಿಮಾಸಕ್ತರನ್ನು ರಂಜಿಸಬಹುದು. ಜೊತೆಗೆ ಸಿನಿಮಾ ಕ್ಷೇತ್ರದ ಸಾಧಕರಿಂದ ರಚನಾತ್ಮಕ ಮತ್ತು ವಿಮರ್ಶಾತ್ಮಕ ಪ್ರತಿಕ್ರಿಯೆಯನ್ನು ಈ ವೇದಿಕೆ ಮೂಲಕ ಪಡೆದುಕೊಳ್ಳಬಹುದು. ಯುವ ಚಲನಚಿತ್ರ ನಿರ್ಮಾಪಕರನ್ನು ಗುರುತಿಸುವಲ್ಲಿ ಮತ್ತು ಪೋಷಿಸುವಲ್ಲಿ BISFF ವೇದಿಕೆ ಕಲ್ಪಿಸಿಕೊಟ್ಟಿದೆ.. ಈ ಉತ್ಸವದಲ್ಲಿ ಪ್ರದರ್ಶನಗೊಂಡು, ಆಯ್ಕೆಯಾಗುವ ಕಿರುಚಿತ್ರವು ಆಸ್ಕರ್ ಅಕಾಡೆಮಿ ಪ್ರಶಸ್ತಿಗಳ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಪರಿಗಣಿಸಲು ಸ್ವಯಂಚಾಲಿತವಾಗಿ ಅರ್ಹವಾಗಿರುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
——–

Be the first to comment

Leave a Reply

Your email address will not be published. Required fields are marked *

Translate »
error: Content is protected !!