‘ಭೈರತಿ ರಣಗಲ್’ಗೆ ನಾಳೆ ಅದ್ಧೂರಿ ಮೂಹೂರ್ತ

ಶಿವರಾಜಕುಮಾರ್ ಹಾಗೂ ನರ್ತನ್ ಕಾಂಬಿನೇಶನ್ ನ ‘ಭೈರತಿ ರಣಗಲ್’ ಚಿತ್ರದ ಅದ್ಧೂರಿ ಮೂಹೂರ್ತ ನಾಳೆ ನಡೆಯಲಿದೆ.

ಚಿತ್ರವನ್ನು ಗೀತಾ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗಲಿದ್ದು ಚಿತ್ರತಂಡದಿಂದ ಹೊಸ ಅಪ್ ಡೇಟ್ ಹೊರ ಬಂದಿದೆ. 2017ರ ಬ್ಲಾಕ್ ಬಸ್ಟರ್ ಚಿತ್ರ ಮುಫ್ತಿ ಮುಂದುವರಿದ ಭಾಗವಾಗಿರುವ ಈ ಚಿತ್ರವು ಮೇ 26ರಂದು ಅದ್ಧೂರಿ ಮುಹೂರ್ತದೊಂದಿಗೆ ಅಧಿಕೃತವಾಗಿ ಲಾಂಚ್ ಆಗಲಿದೆ.

ಮುಫ್ತಿ ಮುಂದುವರಿದ ಭಾಗಕ್ಕೆ ಶಿವರಾಜ್‌ ಕುಮಾರ್ ಪಾತ್ರದ ಹೆಸರನ್ನು ಇಡಲಾಗಿದೆ. ಭೈರತಿ ರಣಗಲ್‌ ನಲ್ಲಿ ತಮ್ಮ ಪಾತ್ರಗಳನ್ನು ದೇವರಾಜ್, ಮಧು ಗುರುಸ್ವಾಮಿ, ವಸಿಷ್ಟ ಸಿಂಹ ಮತ್ತು ಬಾಬು ಹಿರಣ್ಣಯ್ಯ ಅವರು ಪುನರಾವರ್ತಿಸಲು ಮತ್ತೆ ಕಾಣಿಸಿಕೊಳ್ಳಲಿದ್ದಾರೆ.

ಈ ಹಿಂದೆ ಮಫ್ತಿಯಲ್ಲಿ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತು ಛಾಯಾಗ್ರಾಹಕ ನವೀನ್ ಕುಮಾರ್ ಇಲ್ಲೂ ಕೆಲಸ ಮಾಡಲಿದ್ದಾರೆ. ಶಿವರಾಜ್‌ ಕುಮಾರ್ ಅವರು ಶ್ರೀನಿ ನಿರ್ದೇಶನದ ಘೋಸ್ಟ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸುತ್ತಿದ್ದಾರೆ. ಅವರು ಜೂನ್ 10ರಿಂದ ಭೈರತಿ ರಣಗಲ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಶಿವರಾಜ್ ಕುಮಾರ್ ಅವರು ಯೋಗರಾಜ್ ಭಟ್ ನಿರ್ದೇಶನದ ಕರಟಕ ಧಮನಕ ಮತ್ತು ಅರ್ಜುನ್ ಜನ್ಯ ಅವರ 45 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!