ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬೈರಾಗಿ ಚಿತ್ರದ ಹಾಡು ರಿಲೀಸ್ ಆಗಿದ್ದು, ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶಿವಣ್ಣ ಅಭಿನಯದ ಬಗ್ಗೆ ಪ್ರಶಂಸೆಗಳು ವ್ಯಕ್ತವಾಗಿವೆ. ಈ ವಯಸ್ಸಿನಲ್ಲೂ ಶಿವಣ್ಣ ಅವರು ಅದ್ಭುತವಾಗಿ ನೃತ್ಯ ಮಾಡಿರುವುದಕ್ಕೆ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
‘ನಕರನಟ’ ಎಂದು ಶುರುವಾಗುವ ಈ ಹಾಡು ನಾಯಕನ ಪಾತ್ರವನ್ನು ವರ್ಣನೆ ಮಾಡುತ್ತದೆ.ಹಾಡಿನ ಸಾಹಿತ್ಯ ಮತ್ತು ಸಂಗೀತ ಎರಡೂ ವಿಭಿನ್ನವಾಗಿವೆ. ಈ ಹಾಡಿಗೆ ಸಂಗೀತ ನಿರ್ದೇಶನ ಅನೂಪ್ ಸೀಳಿನ್ ಮಾಡಿದ್ದಾರೆ. ಅನೂಪ್ ಪ್ರಯೋಗಕ್ಕೆ ಕೇಳುಗರು ಜೈಕಾರ ಹಾಕುತ್ತಿದ್ದಾರೆ. ಹಾಡಿನಲ್ಲಿ ವಿಭಿನ್ನ ಎರಿಳಿತಗಳು ಇದ್ದು ಡಿಫ್ರೆಂಟ್ ಫೀಲ್ ಕೊಡುತ್ತಿದೆ.
‘ಬೈರಾಗಿ’ ಚಿತ್ರದ ಪೋಸ್ಟರ್ ಈ ಹಿಂದೆ ರಿಲೀಸ್ ಆಗಿತ್ತು. ಚಿತ್ರದ ಟ್ರೈಲರ್ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರ ತಂಡ ಬಹುತೇಕ ಎಲ್ಲಾ ಕೆಲಸಗಳನ್ನು ಮುಗಿಸಿದ್ದು, ರಿಲೀಸ್ಗೆ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯದಲ್ಲೇ ಸಿನಿಮಾದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡುವ ನಿರೀಕ್ಷೆ ಹೊಂದಲಾಗಿದೆ.
ಸಿನಿಮಾದಲ್ಲಿ ಶಿವರಾಜ್ಕುಮಾರ್ ಜೊತೆ ಡಾಲಿ ಧನಂಜಯ್ ಅಭಿನಯಿಸಿದ್ದಾರೆ. ನಿರ್ದೇಶಕ ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದಾರೆ. ಯಶ್ ಶಿವಕುಮಾರ್, ಅಂಜಲಿ, ಪೃಥ್ವಿ ಅಂಬರ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕೃಷ್ಣ ಸಾರ್ಥಕ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಭಜರಂಗಿ 2 ಚಿತ್ರದ ಬಳಿಕ ಬಿಡುಗಡೆ ಆಗುತ್ತಿರುವ ಶಿವಣ್ಣ ನಟನೆಯ ಚಿತ್ರ ಇದಾಗಿದೆ. ಅಭಿಮಾನಿಗಳು ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
____

Be the first to comment