ಮಲೆನಾಡ ಭಾಗದ ಮೀನು ಬೇಟೆ ಪದ್ಧತಿ ಕುರಿತಾದ ಕೆರೆಬೇಟೆ ಚಿತ್ರದ ನಾಯಕಿ ಬಿಂದು ಶಿವರಾಂ ಕನ್ನಡ ಚಿತ್ರರಂಗದಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಕಾಲೇಜು ದಿನಗಳಲ್ಲಿ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಬಿಂದು ಶಿವರಾಂ ಬಳಿಕ ಸಿನಿಮಾದಲ್ಲಿ ಒಲವು ಬೆಳೆಸಿಕೊಂಡರು. ಹಲವು ಆಡಿಶನ್ ಗಳಲ್ಲಿ ಭಾಗಿಯಾದ ಅವರು ಕೆರೆಬೇಟೆ ಚಿತ್ರಕ್ಕೂ ಆಡಿಷನ್ ನೀಡಿದ್ದರು. ಅವರ ಅಭಿನಯವನ್ನು ಮೆಚ್ಚಿದ ಚಿತ್ರತಂಡ ನಾಯಕಿ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಿತು.
ನಾನು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಬಿಎ ಈವೆಂಟ್ ಮ್ಯಾನೇಜ್ಮೆಂಟ್ ಪದವಿ ಪಡೆದಿದ್ದೇನೆ. ಈವೆಂಟ್ ಪ್ಲಾನರ್ ಆಗಿ ಕೆಲಸ ಮಾಡಿದ್ದೇನೆ. ಕೆರೆಬೇಟೆ ತಂಡದ ಆಡಿಷನ್ ನಲ್ಲಿ ಭಾಗಿಯಾದಾಗ ಕೆಲ ದಿನಗಳ ನಂತರ ಪ್ರೊಡಕ್ಷನ್ ನಿಂದ ನಾಯಕಿ ಪಾತ್ರಕ್ಕೆ ಆಯ್ಕೆಯಾದ ಬಗ್ಗೆ ಕರೆ ಬಂತು. ಬಳಿಕ ಅವರೇ ನೀನಾಸಂ ತರಬೇತಿದಾರರಿಂದ ಅಭಿನಯ ತರಬೇತಿ ನೀಡಿದರು. ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ ಕೆರೆಬೇಟೆ ಚಿತ್ರತಂಡಕ್ಕೆ ಧನ್ಯವಾದಗಳು ಎಂದು ಬಿಂದು ಶಿವರಾಮ್ ಹೇಳಿದ್ದಾರೆ.
ಬಿಂದು ಶಿವರಾಂ ಅವರು ಕರ್ನಾಟಕ ತಂಡದ ಪರವಾಗಿ 2 ಬಾರಿ ರೋಲ್ ಬಾಲ್ ಸೌತ್ ಚಾಂಪಿಯನ್ಶಿಪ್ ನಲ್ಲಿ ಬಹುಮಾನ ಪಡೆದಿದ್ದಾರೆ. ಇವರು ವೆಸ್ಟೆರ್ನ್ ಡ್ಯಾನ್ಸ್ ಕಲಿತಿದ್ದಾರೆ. ಅಂತೆಯೇ ಪವರ್ ಯೋಗದಲ್ಲೂ ನಿಪುಣತೆ ಹೊಂದಿದ್ದಾರೆ.
ರಾಜ್ ಗುರು ಅವರ ನಿರ್ದೇಶನದ ಮೊದಲ ಚಿತ್ರ ಕೆರೆಬೇಟೆ ಆಗಿದೆ. ಇವರು ಸಾಕಷ್ಟು ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದಾರೆ. ಈ ಚಿತ್ರದ ನಾಯಕ ಆಗಿ ಗೌರಿಶಂಕರ್ ಅಭಿನಯಿಸಿದ್ದಾರೆ.
ಈಗಾಗಲೇ ಕೆರೆಬೇಟೆ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದ್ದು, ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ. ಸಿನಿಮಾವನ್ನು ಶಿವಮೊಗ್ಗ ಜಿಲ್ಲೆಯ ಸಿಗಂದೂರ ಹಾಗೂ ಸೊರಬ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.
ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಈ ಚಿತ್ರ ಯಶಸ್ಸನ್ನು ಕೊಡುವ ನಿರೀಕ್ಷೆಯಲ್ಲಿ ಚಿತ್ರದ ನಾಯಕಿ ಬಿಂದು ಶಿವರಾಮ್ ಇದ್ದಾರೆ.


Be the first to comment