ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಹುನಿರೀಕ್ಷಿತ ಸಿನಿಮಾ ‘ಬಿಲ್ಲ ರಂಗ ಭಾಷಾ’ ಚಿತ್ರದ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಅಪ್ ಡೇಟ್ ಕೊಟ್ಟಿದ್ದಾರೆ. ನಾಳೆಯಿಂದ ಬಿಲ್ಲ ರಂಗ ಭಾಷಾ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಗಲಿದೆ.
‘ನಾವು ನಾಳೆ ಪ್ರಾರಂಭಿಸುತ್ತೇವೆ. ಬಿಬಿಕೆಫಸ್ಟ್ ಬ್ಲಂಡ್ 9 ಗಂಟೆಗೆ’ ಎಂದು ಬರೆದಿರುವ ಪೋಸ್ಟರ್ ನ್ನು ಅನೂಪ್ ಭಂಡಾರಿ ಹಂಚಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಅನೂಪ್ ಭವಿಷ್ಯದ ಕಥೆಯನ್ನು ಹೇಳಲಿದ್ದಾರೆ ಎನ್ನಲಾಗುತ್ತಿದೆ.
‘ವಿಕ್ರಾಂತ್ ರೋಣʼ ಸಿನಿಮಾದ ಬಳಿಕ ನಿರ್ದೇಶಕ ಅನೂಪ್ ಭಂಡಾರಿ ಮತ್ತು ಸುದೀಪ್ ಕಾಂಬೋ ಒಂದಾಗುತ್ತಿದೆ. ಕಿಚ್ಚನ ಅಭಿಮಾನಿಗಲ್ಲಿ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗುತ್ತಿದೆ. 2209 ADʼಯ ಕಥೆ ಈ ಸಿನಿಮಾದಲ್ಲಿ ಇರಲಿದೆ ಎಂದು ಚಿಕ್ಕ ವಿಡಿಯೋ ಗ್ಲಿಂಪ್ಸ್ ಮೂಲಕ ಚಿತ್ರತಂಡ ಈ ಹಿಂದೆ ರಿವೀಲ್ ಮಾಡಿತ್ತು.
ಬಿಲ್ಲ ರಂಗ ಭಾಷಾ ಜೊತೆಗೆ ಕೆಆರ್ಜಿ ಪ್ರೊಡಕ್ಷನ್ಸ್ನ ನಿರ್ಮಾಣದಲ್ಲಿ ಮೂಡಿ ಬರಲಿರುವ ಕಿಂಗ್ ಕಿಚ್ಚ ಚಿತ್ರಕ್ಕೆ ಸುದೀಪ್ ಆಕ್ಷನ್ ಕಟ್ ಹೇಳಿ ನಟಿಸುತ್ತಿದ್ದಾರೆ. ಬಳಿಕ ತಮಿಳಿನ ಚೇರನ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ತಮಿಳಿನ ಮತ್ತೊಬ್ಬ ನಿರ್ದೇಶಕರ ಸಿನಿಮಾದಲ್ಲಿಯೂ ಸುದೀಪ್ ನಟಿಸುತ್ತಿದ್ದಾರೆ.
—–

Be the first to comment