ಬಿಲ್ಲಾ ರಂಗ ಬಾಷಾ

ಸೆ.2ಕ್ಕೆ ‘ಬಿಲ್ಲಾ ರಂಗ ಬಾಷಾ’ ತುಣುಕು ಬಿಡುಗಡೆ

ಕಿಚ್ಚ ಸುದೀಪ್ ಅವರ ‘ಬಿಲ್ಲಾ ರಂಗ ಬಾಷಾ’ ಸಿನಿಮಾದ ತುಣುಕು ಸೆ.2ರಂದು ಬಿಡುಗಡೆಯಾಗಲಿದೆ.

”ಮತ್ತೊಮ್ಮೆ ಕಿಚ್ಚ ಸುದೀಪ್‌ ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ಖುಷಿ ನೀಡಿದೆ. ಸೆ.2ರಂದು ಸುದೀಪ್ ಅವರ ಜನ್ಮದಿನದಂದು ಮತ್ತೆ ಭೇಟಿಯಾಗೋಣ. ಅಂದು ಬೆಳಗ್ಗೆ 10 ಗಂಟೆಗೆ ಬಿಆರ್‌ಬಿ ಸಿನಿಮಾ ಘೋಷಣೆಯಾಗಲಿದೆ” ಎಂದು ಅನೂಪ್‌ ಭಂಡಾರಿ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಸುದೀಪ್ ಅವರ ‘ವಿಕ್ರಾಂತ್‌ ರೋಣ’ 2022ರ ಜುಲೈನಲ್ಲಿ ಬಿಡುಗಡೆಯಾಗಿತ್ತು. ಆನಂತರ ಇವರ  ‘ಮ್ಯಾಕ್ಸ್‌’ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದರೂ ರಿಲೀಸ್‌  ಬಗ್ಗೆ ಚಿತ್ರತಂಡ ಇನ್ನೂ ಮಾಹಿತಿ ನೀಡಿಲ್ಲ. ಸುದೀಪ್‌ ನಟನೆಯ 46ನೇ ಸಿನಿಮಾ ‘ಮ್ಯಾಕ್ಸ್‌’ ಶೀಘ್ರದಲ್ಲೇ ತೆರೆಗೆ ಬರುವ ಸಾಧ್ಯತೆ ಇದೆ.

‘ಮೈ ಆಟೋಗ್ರಾಫ್‌’ ಸಿನಿಮಾ ಮೂಲಕ ನಿರ್ದೇಶಕನ ಕ್ಯಾಪ್‌ ತೊಟ್ಟಿದ್ದ ಸುದೀಪ್‌ ‘ಮಾಣಿಕ್ಯ’ ಸಿನಿಮಾ ಬಳಿಕ ಮತ್ತೊಮ್ಮೆ ನಿರ್ದೇಶನಕ್ಕೆ  ಸಿದ್ಧತೆ ನಡೆಸಿದ್ದಾರೆ. ತಮ್ಮ ನಟನೆಯ 50ನೇ ಸಿನಿಮಾವನ್ನು ತಾವೇ ನಿರ್ದೇಶಿಸಲಿದ್ದಾರೆ. ಈ ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋಸ್‌ನಡಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ನಿರ್ಮಿಸುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!