`ಬಿಗ್’ಹೌಸ್‍ನ ಅರೀಸನ ಸಣ್ಣ ಬುದ್ಧಿ!

ಪಿಆರ್‍ಓ ಆಗಿರುವ ಸಣ್ಣ ಮನಸ್ಸಿನ ಅರೀಸಿ ಯಾರಿಗೆ ಗೊತ್ತಿಲ್ಲ ಹೇಳಿ. ಪಿಆರ್‍ಓ ಆಗಿ ಸಾಕಷ್ಟು ವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ಪ್ರಾಮಾಣಿಕ(!) ಸೇವೆ ಸಲ್ಲಿಸುರುವ ಅರೀಸ, ಇಂದಿಗೂ ಕುಂಟುತ್ತಾ ತನ್ನ ಕೆಲಸವನ್ನು ತನ್ನ ಪಾಡಿಗೆ ತಾನು ಮಾಡಕೊಂಡಿದ್ದರೆ ಇವತ್ತು ಈ ಆಸಾಮಿ ಬಗ್ಗೆ ಹೇಳವ ಅಗತ್ಯ ಇರಲಿಲ್ಲ. ಗಾಂಧಿನಗರದ ಆಯಕಟ್ಟಿನ ಸ್ಥಳದಲ್ಲಿರುವ ಪಿಆರ್‍ಓ ಆಫೀಸ್‍ನಲ್ಲಿ ಕುಳಿತು ಸ್ಟಾರ್ ನಟರಿಂದ ಹಿಡಿದು, ನಿನ್ನೆ ಮೊನ್ನೆ ಬಂದ ಚಿಲ್ಟು ನಟರ ಬಗ್ಗೆ ರೂಮರ್‍ಗಳನ್ನು ಹಬ್ಬಿಸುವುದೇ ಈ ಅರೀಸನ ಫುಲ್‍ಟೈಂ ಜಾಬ್.

ಚಿತ್ರರಂಗದ ಆಳ-ಅಗಲ ಗೊತ್ತಿರುವ ಈತ ತನ್ನ ಕೆಲಸದ ಬಗ್ಗೆ ಅಷ್ಟೇ ಯೋಚಿಸಿದ್ದರೆ ಇಷ್ಟೊತ್ತಿಗೆ ಲೈಫ್‍ನಲ್ಲಿ ಒಂದು ಮಟ್ಟಕ್ಕೆ ಸೆಟಲ್ ಆಗ ಬಹುದಿತ್ತು, ಆದ್ರೆ ಹಾಳಾದ ಬಾಯಿ ಚಟ ಬಿಡಬೇಕಲ್ಲ!. ಈತನ ಓಚರ್ ರಾಜಕೀಯದ ಬಗ್ಗೆ ಒಂದಿಷ್ಟು ಹೇಳಲೆ ಬೇಕು. ಕಷ್ಟಪಟ್ಟು ದುಡ್ಡು ಹೊಂದಿಸಿಕೊಂಡು ಚಿತ್ರ ಮಾಡುವ ನಿರ್ಮಾಪಕರಿಗೆ ಈತ ಆಪ್ ಈಡುವುದರಲ್ಲಿ ನಿಸ್ಸೀಮ.

ನಿರ್ಮಾಪಕ ಕೊಟ್ಟ 500 ಅಥವಾ 1000 ರುಪಾಯಿಯ ಓಚರ್‍ಗಳನ್ನು ಒಂದಷ್ಟು ದಿನಪತ್ರಿಕೆಗಳ ಪತ್ರಕರ್ತರ ಕೈಗಿಟ್ಟು ಸುಮ್ಮನಾಗುತ್ತಾನೆ. ಆದರೆ ನಿರ್ಮಾಪಕನಿಗೆ ರಾಜ್ಯದಲ್ಲಿರುವ ಅಷ್ಟೂ ದಿನಪತ್ರಿಕೆ, ಮಾಸ ಪತ್ರಿಕೆ, ಟಾಬ್ಲೈಡ್.. ಹೀಗೆ ಎಲ್ಲಕ್ಕೂ ಕೊಟ್ಟಿದ್ದೇನೆ ಎಂದು ಜೊಲ್ಲು ಸುರಿಸುತ್ತಾ ಹೇಳುತ್ತಾನೆ. ಇತ್ತ ಈತ ಮಾಡಿದ `ಓಚರ್ ರಾಜಕೀಯ’ವನ್ನರಿತ ಪತ್ರಕರ್ತರು ಆ ಸಿನ್ಮಾದ ಬಗ್ಗೆ ಅಪ್ಪಿ ತಪ್ಪಿಯೂ ಎರಡಕ್ಷರ ಬರೆಯುವುದಿಲ್ಲ. ಅರೀಸನನ್ನು ನಂಬಿಕೊಂಡ ನಿರ್ಮಾಪಕನಿಗೆ ಇದರ ಅರಿವಾಗುವುದರಲ್ಲಿ ಚಿತ್ರ ಓಡುತ್ತಿರುತ್ತದೆ.. ಥೀಯೆಟರ್‍ನಿಂದ ಹೊರಗಡೆ!

ಇದಿಷ್ಟೇ ಈ ಅರೀಸನ ಪ್ರತಾಪ ಅಂದುಕೊಂಡರೆ ನಿಮ್ಮ ಊಹೆ ತಪ್ಪು ಈ ಇಳಿವಯಸ್ಸಿನಲ್ಲೂ ಈತನ ಎನರ್ಜಿಟಿಕ್ ಸ್ಟೋರಿಗಳನ್ನು ನೀವು ಕೇಳಬೇಕು, ಬೆಚ್ಚಿಬೀಳ್ತೀರಿ. ಅರೀಸನ ಇನ್ನಷ್ಟು ನಾನ್‍ಸೆನ್ಸ್ ಆಟಗಳನ್ನು ಮುಂದೆ ಹೇಳ್ತೀವಿ. ಅರೀಸಾ ವೀಸಾ ರೆಡಿ ಮಾಡ್ಕೊಂಡು ಎಸ್ಕೇಪ್ ಆಗಿ ಬಿಡ್ಬೇಡ, ಕನ್ನಡ ಚಿತ್ರರಂಗದ ಅಪರೂಪದ ಇನ್ನೊಬ್ಬ ನಾಲಾಯಕ್ ಪಿಆರ್‍ಓನ ಸ್ಟೋರಿಯನ್ನು ಇಲ್ಲೇ ಹೇಳ್ತೀವಿ ಕೆಟ್ಟದ್ದನೇ ಕೇಳ ಬಯಸುವ ನಿನ್ನ ಕಿವಿ ತಂಪಾಗಬಹುದು.

This Article Has 4 Comments
  1. Pingback: this

  2. Pingback: cornhole solutions

  3. Pingback: 밤토끼시즌2

  4. Pingback: pembukaan polsuspas 2022

Leave a Reply

Your email address will not be published. Required fields are marked *

Translate »
error: Content is protected !!