ಬಹುಕೃತ ವೇಷಂ ಅಂತಿದ್ದಾರೆ ವೈಷ್ಣವಿಗೌಡ

ಮೊದಲ ಬಾರಿಗೆ ನಾಯಕಿಯಾಗಿ ವೈಷ್ಣವಿ ಗೌಡ ನಟಿಸುತ್ತಿರುವ ಸಿನಿಮಾ ‘ಬಹುಕೃತ ವೇಷಂ’. ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಈ ಸಿನಿಮಾ ಸಜ್ಜಾಗಿದೆ. ಈ ಹಿಂದೆ ಗೌಡ್ರು ಸೈಕಲ್ ಚಿತ್ರದಲ್ಲಿ ಗಮನ ಸೆಳೆದಿದ್ದ ಶಶಿಕಾಂತ್, ವೈಷ್ಣವಿಗೌಡ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ

ಗೌಡ್ರು ಸೈಕಲ್ ಎಂಬ ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರವನ್ನು ಮಾಡಿದ್ದ ಚಿತ್ರತಂಡ, ಇದೇ ಸಿನಿಮಾ ಮಾಡಿದೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಈ ಚಿತ್ರದಲ್ಲಿದ್ದು, ಈ ಚಿತ್ರವನ್ನು ಪ್ರಶಾಂತ್ ಕೆ. ಎಳ್ಳಂಪಳ್ಳಿ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಬಹುಕೃತ ವೇಷಂ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ನಾಯಕ ಶಶಿಕಾಂತ್ ಮಾತನಾಡಿ, ನನ್ನದು ಎರಡು ಶೇಡ್ ಇರೊ ಪಾತ್ರ. ಡಿಲೇರಿಯಂ ಫೋಬಿಯಾ ಎನ್ನುವ ಖಾಲೆಯ ಮೇಲೆ ಮಾಡಿರುವ ಚಿತ್ರವಿದು. ನಾವು ಈ ಕಥೆ ಮಾಡಿಕೊಂಡು ನಿರ್ಮಾಪಕರ ಬಳಿ ಹೋದಾಗ ಮೊದಲು ಒಪ್ಪಲಿಲ್ಲ, ನಂತರ ನಮ್ಮ ಹಿಂದಿನ ಚಿತ್ರಕ್ಕೆ ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆಗಳನ್ನು ತಂದು ತೋರಿಸಿದಾಗ ಒಪ್ಪಿದರು.

ಚಿತ್ರದ ಕಥೆ ಬರೆದಿರುವ ಅಧ್ಯಾಯ ತೇಜ್ ಮಾತನಾಡಿ, ನನ್ನ ಸ್ನೇಹಿತನೊಬ್ಬನಿಗೆ ಈ ಥರದ ಖಾಯಿಲೆ ಇತ್ತು. ನಿತ್ಯ ಅವನ ಮೇಲೆ ಅವನೇ ಫೈಟ್ ಮಾಡ್ತಿರ್ತಾನೆ. ಇದನ್ನು ಸ್ನೇಹಿತ ಶಶಿಕಾಂತ್ ಬಳಿ ಹೇಳಿದೆ. ಆತನೂ ಸಿನಿಮಾ ಮಾಡಲು ಒಪ್ಪಿದ, ಕಂಟೆಂಟ್ ಸಿನಿಮಾವನ್ನು ಕಮರ್ಷಿಯಲ್​ ಆಗಿ ಮಾಡಿದ್ದೇವೆ ಎಂದು ಹೇಳಿದರು.

ಚಿತ್ರದ ಪ್ರೀಕ್ಲೈಮ್ಯಾಕ್ಸ್​​ನಲ್ಲಿ ನಾಲ್ಕೂವರೆ ನಿಮಿಷದ ಒಂದೇ ಶಾಟ್ ಇದೆ. ಅದರಲ್ಲಿ ವೈಷ್ಣವಿಗೌಡ ಅವರು ನಗು, ಅಳು ಸೇರಿಸಿ ಪೈಪೋಟಿಗೆ ಬಿದ್ದವರಂತೆ ಅಭಿನಯಿಸಿದ್ದಾರೆ. ವೈಶಾಖ್ ವಿ.ಭಾರ್ಗವ್ ಈ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಿರಣ್ ಕೃಷ್ಣಮೂರ್ತಿ ಅವರು ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!