ಲಂಬಾಣಿ ಉಡುಗೆಯಲ್ಲಿ ಮಿಂಚಿದ ಶುಭಾ ಪೂಂಜಾ

ನಟಿ ಶುಭಾ ಪೂಂಜಾ ‌ಅವರು ಸಿನಿಮಾ‌ ಒಂದಕ್ಕೆ  20 ಕೆಜಿ ಭಾರದ ಕಾಸ್ಟ್ಯೂಮ್ ಧರಿಸುವ ಮೂಲಕ ಸುದ್ದಿಯಾಗಿದ್ದಾರೆ.

‘ಅಂಬುಜ’ ಸಿನಿಮಾದಲ್ಲಿ ವಿಭಿನ್ನವಾದ ಪಾತ್ರದಲ್ಲಿ ಶುಭಾ ಪೂಂಜಾ ನಟಿಸುತ್ತಿದ್ದಾರೆ. ಎರಡು ಶೇಡ್ ನ ಪಾತ್ರ ಇಲ್ಲಿದ್ದು, ಒಂದರಲ್ಲಿ ಪತ್ರಕರ್ತೆಯಾಗಿ ಮತ್ತೊಂದರಲ್ಲಿ ಲಂಬಾಣಿ ಹುಡುಗಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಲಂಬಾಣಿ ಹುಡುಗಿಯ ಪಾತ್ರದಲ್ಲಿ ಶುಭಾ ಅವರು ಧರಿಸಿರುವ ಕಾಸ್ಟ್ಯೂಮ್ ನ ಭಾರ 20 ಕೆಜಿ ಆಗಿದೆ!

ಈ ಸಿನಿಮಾ ಸೈಕಲಾಜಿಕಲ್ ಥ್ರಿಲ್ಲರ್ ಆಗಿದೆ. ಅಂಬುಜ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದ್ದು ಶುಭಾ ಪೂಂಜಾ ಅವರು ಪೋಸ್ಟರ್ ನಲ್ಲಿ ಲಂಬಾಣಿ ಹುಡುಗಿಯಾಗಿ ಗಮನ ಸೆಳೆದಿದ್ದಾರೆ.

ಈ ಕಾಸ್ಟ್ಯೂಮ್ ನ್ನು ಲಂಬಾಣಿಗರು ತುಂಬಾ ಸಮಯ ತೆಗೆದುಕೊಂಡು ತಯಾರಿಸಿದ್ದಾರೆ. ಇದೊಂದು ನೈಜ ಘಟನೆ ಆಧಾರಿತ ಸಿನಿಮಾ ಆಗಿದ್ದು, ಗದಗದಲ್ಲಿ ಈ ಘಟನೆ ನಡೆದಿತ್ತು ಎನ್ನಲಾಗಿದೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ, ಪ್ರಿಯಾಂಕ ಕಾಮತ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದ ನಿರ್ಮಾಪಕ ಕಾಶಿನಾಥ್ ಮಡಿವಾಳರ್ ಆಗಿದ್ದು ನಿರ್ದೇಶನದ ಹೊಣೆ ಶ್ರೀನಿ ಹನುಮಂತರಾಜು ಅವರದ್ದು ಆಗಿದೆ.

ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಜನಪ್ರಿಯತೆ ಪಡೆದ ಶುಭಾ ಪೂಂಜಾ ಮುಂದೆ ಆಯ್ಕೆಯಲ್ಲಿ ಎಡವಿದ ಕಾರಣ ಅವಕಾಶ ಮತ್ತು ಜನಪ್ರಿಯತೆ ಕಳೆದುಕೊಂಡರು. ಈಗ ಅವರು ಈ ಸಿನಿಮಾದ ಮೂಲಕ ಮತ್ತೆ ಯಶಸ್ಸಿನ ಹಾದಿಗೆ ಮರಳಲು ಎದುರು ನೋಡುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!