ಏಪ್ರಿಲ್ 26ಕ್ಕೆ “ಪುರುಷೋತ್ತಮ’ ಟ್ರೈಲರ್

ಬಾಡಿ ಬಿಲ್ಡರ್ ಆಗಿ ಹೆಸರು ಮಾಡಿರುವ ಜಿಮ್‌ ರವಿ ಮೊದಲ ಬಾರಿಗೆ ನಾಯಕ ನಟರಾಗಿ ನಟಿಸಿರುವ “ಪುರುಷೋತ್ತಮ’ ಚಿತ್ರದ ಟ್ರೈಲರ್ ಏಪ್ರಿಲ್ 26ರಂದು ಬಿಡುಗಡೆ ಆಗಲಿದೆ.

ಅಂದು ಸಂಜೆ 4 ಗಂಟೆಗೆ ಟ್ರೈಲರ್ ನ್ನು ನಿರ್ದೇಶಕ ರಿಷಬ್ ಶೆಟ್ಟಿ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ರವಿ ತಿಳಿಸಿದ್ದಾರೆ.

“ನಾಯಕನಿಂದ ಒದೆ ತಿನ್ನಿಸಿಕೊಳ್ಳುವ ದೃಶ್ಯಗಳನ್ನು ನೋಡುತ್ತಿದ್ದ ಜನರು ನೀವು ಯಾವಾಗ ಹೀರೋ ಆಗೋದು ಎಂದು ಹಲವು ವರ್ಷದಿಂದ ಕೇಳುತ್ತಿದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಚಿತ್ರದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಅಂಶವಿದೆ ” ಎಂದು ರವಿ ತಿಳಿಸಿದ್ದಾರೆ.

“ಆಡಿಯೋ ಹಕ್ಕನ್ನು ಮಾರಲು ಹೋದಾಗ ಕಹಿ ಅನುಭವಗಳು ಆಗಿವೆ. ಹೀಗಾಗಿ ಜಿಮ್ ರವಿ ಅಫೀಶಿಯಲ್ ಯೂಟ್ಯೂಬ್‌ದಲ್ಲಿ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ” ಎಂದು ಅವರು ಹೇಳಿದ್ದಾರೆ.

ಕಳೆದ 3 ದಶಕದಿಂದ 70 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜಿಮ್‌ ತರಬೇತಿ ನೀಡಿರುವ ರವಿ, “ರವೀಸ್‌ ಜಿಮ್‌ ಪ್ರೊಡಕ್ಷನ್ಸ್‌’ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದು ಪುರುಷೋತ್ತಮ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು, ಚಿತ್ರ ಬಿಡುಗಡೆಗೆ ಸಿದ್ಧ ಆಗಿದೆ.

ಎಸ್‌.ವಿ ಅಮರನಾಥ್‌ ಅವರು “ಪುರುಷೋತ್ತಮ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ಸಂಯೋಜಿಸಿದ್ದಾರೆ. ನಾಯಕಿ ಆಗಿ ಅಪೂರ್ವ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.

ಚಿತ್ರ ಮೇ 6ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!