ನೆಮ್ಮದಿಯ ಬದುಕು ನಡೆಸುವುದಕ್ಕೆ ನಾನಾ ದಾರಿಯಿದೆ. ನಾವು ಕಂಡ ಕನಸೆಲ್ಲ ನನಸ್ಸಾಗುತ್ತೆ ಎಂದು ನಂಬುವುದಕ್ಕಿಂತ ನಮ್ಮ ಶ್ರದ್ಧೆ, ನಿಷ್ಠೆಯಿಂದ ಅದು ಯಾವುದೇ ಉತ್ತಮ ಕೆಲಸವಾಗಲಿ ಸಂಕೋಚವಿಲ್ಲದಂತೆ ಮಾಡಿದರೆ ನೆಮ್ಮದಿಯಾಗಿ ಇರಬಹುದು.
ಆ ನಿಟ್ಟಿನಲ್ಲಿ ಈಗ ಬಿಗ್ ಬಾಸ್ ಸೀಸನ್ 5ರಲ್ಲಿ ಕಾಮನ್ ಮ್ಯಾನ್ ಎಂದೇ ಗುರುತಿಸಿಕೊಂಡ ದಿವಾಕರ್ ಈಗ ಬದುಕಿಗಾಗಿ ಸೊಪ್ಪನ್ನ ಮಾರುತ್ತಿದ್ದಾರೆ. ಬಿಗ್ ಬಾಸ್ ಗೆ ಹೋಗುವ ಮುಂಚೆ ಹಲವಾರು ಪ್ರಾಡಕ್ಟ್ಗಳನ್ನು ಮಾರುತ್ತಿದ್ದವರು.
ಆತ ಸುಮ್ಮನೆ ಕೂರುವ ವ್ಯಕ್ತಿಯಾಗಿರಲಿಲ್ಲ. ಓಡಾಟವೇ ಜೀವನ ವಾಗಿದ್ದರಿಂದ ದಿವಾಕರ್ ಗೆ ದುಡಿದು ಬದುಕುವುದೇ ಕಾಯಕವಾಗಿತ್ತು. ಬಿಗ್ ಬಾಸ್ ಸೀಸನ್ 5ರಿಂದ ಹೊರಬಂದ ನಂತರ ಚಿತ್ರಗಳ ಆಫರ್ ಗಳು ಅವರನ್ನು ಹುಡುಕಿಕೊಂಡು ಬಂತು, ಆ ನಿಟ್ಟಿನಲ್ಲಿ ಗುಲಾಲ್ ಡಾಟ್ ಕಾಮ್ ಎನ್ನುವ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಾರೆ.
ಹಾಗೇ ಹಲವಾರು ಸಾಮಾಜಿಕ ಕಾರ್ಯಕ್ರಮಗಳು ಕೂಡ ಪಾಲ್ಗೊಳ್ಳುತ್ತಾರೆ. ಬಣ್ಣದ ಬದುಕಿಗೆ ಬಂದವರು ಬೇರೆ ಕೆಲಸ ಕಡೆ ಗಮನ ಕೊಡುವುದು ಬಹಳ ಕಮ್ಮಿ . ಆದರೆ ದಿವಾಕರ್ ಮಾತ್ರ ಇದ್ಯಾವುದಕ್ಕೂ ಜಗ್ಗದೆ ತನ್ನ ದುಡಿಮೆಯನ್ನೇ ನಂಬಿದವರು.
ಈಗ ತಮ್ಮದೇ “ದಿವಾಕರ್ ರೆಮಿಡೀಸ್” ಎಂಬ ಸ್ವಂತ ಕಂಪನಿಯಲ್ಲಿ ಆಯುರ್ವೇದಿಕ್ ಪ್ರಾಡಕ್ಟ್ ಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಕೊರೋನಾ ಎಫೆಕ್ಟ್ ನಿಂದ ಎಲ್ಲವೂ ಸ್ಥಗಿತಗೊಂಡ ಕಾರಣ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವ ಸ್ಥಿತಿ ಬಂದಿದೆ. ಆದರೆ ಇದಕ್ಕೆ ಜಗ್ಗದ ದಿವಾಕರ್ ಒಂದು ದಿನ ಹೊರಗಡೆ ಬಂದು ಮಾರ್ಕೆಟ್ ಅತ್ತ ತಿರುಗಾಡಿದ್ದಾರೆ.
ಅಲ್ಲಿ ತರಕಾರಿ, ಸೊಪ್ಪು ಮಾರಾಟ ಮಾಡುವುದನ್ನು ಕಂಡು, ನಾನು ಸೊಪ್ಪು ಮಾರಬೇಕು ಎಂದು ನಿರ್ಧರಿಸಿ, ತರಾವರಿ ಸೊಪ್ಪನ್ನು ಬೆಳಗ್ಗೆನೇ ಹೋಗಿ ತಂದು ಮಾರಾಟ ಮಾಡುತ್ತಿದ್ದಾರೆ. ಇದರ ಜೊತೆಗೆ ತಮ್ಮ ಕಂಪನಿಯ ಸ್ಯಾನಿಟೈಸರ್ ಹಾಗೂ ಮಾಸ್ಕ್ ಕೂಡ ಮಾರುತ್ತಿದ್ದಾರೆ.
ದುಡ್ಡು ಕೊಡಲು ಶಕ್ತಿ ಇಲ್ಲದವರಿಗೆ ಕೂಡ ಸೊಪ್ಪುಗಳನ್ನು ಉಚಿತವಾಗಿ ನೀಡುವ ಮೂಲಕ ನೊಂದವರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ನಿಜವಾಗಿಯೂ ಇದು ಮಾನವೀಯತೆ ಸೇರಿ… ಬದುಕು ಮುಖ್ಯ , ಜನರ ಕಷ್ಟಕ್ಕೆ ಸ್ಪಂದಿಸುವುದು ಅಷ್ಟೇ ಮುಖ್ಯವಾಗಿ ನಡೆದುಕೊಳ್ಳುತ್ತಿರುವ ದಿವಾಕರ್ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Pingback: roofing company Topeka
Pingback: sextuplets tlc