‘ಬಿಗ್ ಬಾಸ್ ಕನ್ನಡ ಸೀಸನ್ 12’ರ ರಿಯಾಲಿಟಿ ಶೋ ಪ್ರೋಮೋ ಹಾಗೂ ಪ್ರಸಾರ ದಿನಾಂಕಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 2ರಂದು ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನದಂದು ಬಿಗ್ ಬಾಸ್ ಪ್ರೋಮೋ ಬಿಡುಗಡೆ ಕಾಣಲಿದೆ ಎಂದು ಹೇಳಲಾಗುತ್ತಿದೆ. ಸೆಪ್ಟೆಂಬರ್ 28ರಂದು ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. ಸೆ. 29ರಿಂದ ಬಿಗ್ ಬಾಸ್ ಆಟ ಶುರುವಾಗಲಿದೆ. ಯಾವೆಲ್ಲ ಸ್ಪರ್ಧಿಗಳು ಈ ಬಾರಿ ಇರುತ್ತಾರೆ ಎನ್ನುವ ಕುತೂಹಲಕ್ಕೆ ಪ್ರೋಮೋದಲ್ಲಿ ಉತ್ತರ ಸಿಗಲಿದೆ.
ಕಿಚ್ಚ ಸುದೀಪ್ ಅವರು ಕಳೆದ ವರ್ಷ ಬಿಗ್ ಬಾಸ್ ನಡೆಸಿ ಕೊಡೋದಿಲ್ಲ ಎಂದು ಹೇಳಿದ್ದರು. ಆದರೆ ಈ ಬಾರಿ ಅವರು ಮತ್ತೆ ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಶೋ ಕುತೂಹಲ ಮೂಡಿಸಿದೆ.
ಬಿಗ್ ಬಾಸ್ನಲ್ಲಿ ಜನ ಸಾಮಾನ್ಯರು ಸ್ಪರ್ಧಿಸಬಹುದು ಎಂಬ ಆಯ್ಕೆಯನ್ನು ಈ ಹಿಂದೆ ನೀಡಲಾಗಿತ್ತು. ಅದನ್ನು ಈ ಬಾರಿ ಅಳವಡಿಸಲಾಗುತ್ತದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆಗೆ ಉತ್ತರ ಪ್ರೋಮೋದಲ್ಲಿ ಸಿಗುವ ಸಾಧ್ಯತೆ ಇದೆ.





Be the first to comment