ಬಿಗ್ ಬಾಸ್ ನಿಂದ ಶಮಂತ್ ಔಟ್

ಬಿಗ್ ಬಾಸ್ 8ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಗೆ ಒಂದು ವಾರ ಬಾಕಿ ಇರುವಾಗ ಶಮಂತ್ ಬ್ರೋ ಗೌಡ ಎಲಿಮಿನೇಟ್ ಆಗಿದ್ದಾರೆ.

ಶನಿವಾರ ಶುಭಾ ಪೂಂಜಾ ಮನೆಯಿಂದ ಹೊರಗೆ ಹೋಗಿದ್ದು, ಈ ವಾರ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ದಿವ್ಯಾ ಸುರೇಶ್​ ಎಲಿಮಿನೇಷನ್​ ಲಿಸ್ಟ್ ನಲ್ಲಿದ್ದರು. ಆದರೆ ಅದೃಷ್ಟ ಶಮಂತ್ ಗೆ ಕೈ ಕೊಟ್ಟಿದ್ದು ಅವರು ಔಟ್ ಆಗಿದ್ದಾರೆ.

ಮೊದಲ ಇನ್ನಿಂಗ್ಸ್ ನಲ್ಲಿ ಅಷ್ಟೊಂದು ಚುರುಕಾಗಿ ಇರದ ಶಮಂತ್ ಎರಡನೇ ಇನ್ನಿಂಗ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ ಅವರು ಹಾಡುಗಳನ್ನು ಬರೆದು ಹಾಡುವ ಜೊತೆಗೆ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ವೈಲ್ಡ್​ ಕಾರ್ಡ್​ ಎಂಟ್ರಿ ಪಡೆದ ವೈಜಯಂತಿ ಅಡಿಗ ಅವರು 42 ನೇ ವಾರದಲ್ಲಿ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವ ಮೂಲಕ ಶಮಂತ್​ ಅವರನ್ನು ಸೇವ್​ ಮಾಡಿದ್ದರು. ನಂತರದಲ್ಲಿ ಶಮಂತ್​ ಲಕ್ಕಿ ಬಾಯ್​ ಎಂದೇ ಕರೆಯಲ್ಪಟ್ಟಿದ್ದರು. ಆದರೆ ಅವರಿಗೆ 113ನೆಯ ದಿನದ ಬಳಿಕ ಅದೃಷ್ಟ ಕೈ ಕೊಟ್ಟಿದೆ.

ಮಂಗಳವಾರ ಮತ್ತೊಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲಿದ್ದಾರೆ. ಗ್ರ್ಯಾಂಡ್ ಫಿನಾಲೆಯಲ್ಲಿ ಯಾರೆಲ್ಲಾ ಸ್ಪರ್ಧಿಗಳು ಟಾಪ್ ಐದರಲ್ಲಿ ಉಳಿಯಲಿದ್ದಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!