ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋದ 8ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭ ಆಗಿದ್ದು ಭಾನುವಾರ ನಡೆಯಲಿರುವ ಗ್ರ್ಯಾಂಡ್ ಫಿನಾಲೆಯಲ್ಲಿ ಯಾರು ಟ್ರೋಫಿ ಜಯಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.
ಪ್ರಶಾಂತ್ ಸಂಬರ್ಗಿ, ಮಂಜು ಪಾವಗಡ, ಕೆಪಿ. ಅರವಿಂದ್, ದಿವ್ಯಾ ಉರುಡುಗ, ಮತ್ತು ವೈಷ್ಣವಿ ಅವರು ಫಿನಾಲೆಯ ಅಂತಿಮ 5 ರಲ್ಲಿ ಸ್ಥಾನ ಪಡೆದಿದ್ದು ಯಾರು ವಿಜೇತರಾಗುವರು ಎನ್ನುವ ಚರ್ಚೆ ಆರಂಭ ಆಗಿದೆ.
ಉತ್ತಮ ಪ್ರದರ್ಶನ ನೀಡಿದ್ದ ದಿವ್ಯಾ ಸುರೇಶ್ ಅವರು ಕೊನೆಯವರಾಗಿ ಎಲಿಮಿನೇಟ್ ಆಗಿದ್ದು ಅಂತಿಮ 5ರ ಸುತ್ತಿನಿಂದ ಕಳೆದ ಮಂಗಳವಾರ ಹೊರ ಬಿದ್ದರು.
ಸದ್ಯದ ಲೆಕ್ಕಾಚಾರದ ಪ್ರಕಾರ ಅರವಿಂದ್ ಹಾಗೂ ಮಂಜು ಪಾವಗಡ ನಡುವೆ ಟ್ರೋಫಿಗಾಗಿ ತೀವ್ರ ಹಣಾಹಣಿ ನಿರೀಕ್ಷಿಸಲಾಗಿದೆ. ವೋಟಿಂಗ್ ಲೈನ್ ತೆರೆದಿದ್ದು ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡುತ್ತಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮ 120 ದಿನಗಳ ಕಾಲ ನಡೆಯುತ್ತಿದ್ದು ಒಟ್ಟು 20 ಸ್ಪರ್ಧಿಗಳು ಭಾಗಿ ಆಗಿದ್ದರು. ಈಗ 5 ಸ್ಪರ್ಧಿಗಳು ಅಂತಿಮ ಸುತ್ತು ಪ್ರವೇಶಿಸಿ ಟ್ರೋಫಿ ಗೆಲ್ಲಲು ಸಾಹಸ ನಡೆಸಿದ್ದಾರೆ. ವಿಜೇತ ಸ್ಪರ್ಧಿ 50 ಲಕ್ಷ ರೂಪಾಯಿ ನಗದು ಬಹುಮಾನ ಗೆಲ್ಲಲಿದ್ದಾರೆ.
ಈ ಬಾರಿಯ ಕೋರೋನ ಎರಡನೇ ಅಲೆ ಹಿನ್ನೆಲೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ ಬಳಿಕ ಮರು ಆಯೋಜನೆ ಮಾಡಲಾಗಿತ್ತು.
______________

Be the first to comment