ತೆಲುಗು ಬಿಗ್ಬಾಸ್ ಸೀಸನ್ 9ರ ಫಿನಾಲೆಗೆ ಸಂಜನಾ ಗಲ್ರಾನಿ, ತನುಜಾ ಪುಟ್ಟಸ್ವಾಮಿ ಎಂಟ್ರಿ ಕೊಟ್ಟಿದ್ದಾರೆ.
ಡಿಸೆಂಬರ್ 21ರ ಫಿನಾಲೆ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 9ರ ವಿಜೇತರು ಯಾರಾಗಲಿದ್ದಾರೆ ಎಂಬುದಕ್ಕೆ ಉತ್ತರ ನೀಡಲಿದೆ. ₹50 ಲಕ್ಷ ಬಹುಮಾನದ ಸ್ಪರ್ಧೆಯ ಐವರು ಸ್ಪರ್ಧಿಗಳಲ್ಲಿ ಕನ್ನಡದ ನಟಿಯರಾದ ಸಂಜನಾ ಗಲ್ರಾನಿ ಮತ್ತು ತನುಜಾ ಪುಟ್ಟಸ್ವಾಮಿ ಸ್ಥಾನ ಪಡೆದಿದ್ದಾರೆ.
ವಿಜೇತರನ್ನು ಮತಗಳಿಂದ ನಿರ್ಧರಿಸಲಾಗುತ್ತದೆ. ವೋಟಿಂಗ್ ಲೈನ್ ಡಿಸೆಂಬರ್ 14 ರಂದು ಪ್ರಾರಂಭವಾಗಿದ್ದು, ಡಿಸೆಂಬರ್ 19ರ ಮಧ್ಯರಾತ್ರಿಯವರೆಗೆ ತೆರೆದಿರುತ್ತದೆ. ಈ ಸ್ಪರ್ಧೆಯಲ್ಲಿ ಕಲ್ಯಾಣ್ ಪಡಾಳ, ನಂದೂರಿ ಎಮ್ಯಾನುಯೆಲ್, ಉಪ್ಪಲ್ ಪವನ್ ಕುಮಾರ್ ಇದ್ದಾರೆ.
ಕನ್ನಡದ ತನುಜಾ ಪುಟ್ಟಸ್ವಾಮಿ ತೆಲುಗಿನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತನುಜಾಗೆ ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಬಿಗ್ಬಾಸ್ನಲ್ಲಿ ಚೆನ್ನಾಗಿ ಆಡುತ್ತಾ ಬರುತ್ತಿರುವ ಅವರಿಗೆ ತೆಲುಗು ಪ್ರೇಕ್ಷಕರು ಸಾಕಷ್ಟು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸೀಸನ್‌ನ ಆರಂಭದಲ್ಲಿ ಸಂಜನಾ ಗಲ್ರಾನಿ ಮನೆಯ ಕ್ಯಾಪ್ಟನ್ ಆಗಿದ್ದರು. ಅವರ ಮಾತುಕತೆ ಮತ್ತು ತಂತ್ರಗಳು ಸರಣಿಯಾದ್ಯಂತ ಗಮನ ಸೆಳೆದಿವೆ. ಐವರು ಸ್ಪರ್ಧಿಗಳಲ್ಲಿ ಯಾರು ವಿಜೇತರಾಗುತ್ತಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
—–





Be the first to comment