Big Boss OTT: ಇಂದಿನಿಂದ OTT ಯಲ್ಲಿ ಬಿಗ್ ಬಾಸ್ ಪ್ರಸಾರ !

ಬಿಗ್ ಬಾಸ್ ಕನ್ನಡದ OTT ಸೀಸನ್ ಒಂದರT)ಶೂಟಿಂಗ್ ಇಂದಿನಿಂದ ನಡೆಯಲಿದ್ದು ಆಗಸ್ಟ್ 6ರಿಂದ ಪ್ರಾರಂಭವಾಗಲಿದೆ. ( Big Boss OTT) ವರದಿಗಳ ಪ್ರಕಾರ ಬಿಗ್ ಬಾಸ್ ಕನ್ನಡದ ತಯಾರಕರು ಸ್ಪರ್ಧಿಗಳಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಹಿಂದಿ ,ತಮಿಳು, ಬಿಗ್ ಬಾಸ್ ಸೀಸನ್ ಗಳಿಂದ ಕೆಲವು ನಿಯಮಗಳನ್ನ ಅಳವಡಿಸಿಕೊಂಡಿದ್ದಾರೆ.

ಬಿಗ್ ಬಾಸ್ ಊಟದಲ್ಲಿ ಪ್ರೀಮಿಯರ್ (Premier) ಆಗಲಿದ್ದು 24 ಗಂಟೆಗಳ ಕಾಲ ಲೈವ್ ನಲ್ಲಿ ಪ್ರಸಾರವಾಗಲಿದೆ. ಸೀಸನ್ 1 ರಿಂದ 42 ದಿನಗಳವರೆಗೆ ಇರಲಿದ್ದು ಸೆಲೆಬ್ರಿಟಿಗಳು ಪ್ರೇಕ್ಷಕರನ್ನ ರಂಜಿಸಲಿದ್ದಾರೆ.ಟಾಪ್ 5 ಸ್ಪರ್ಧಿಗಳು ಬಿಗ್ ಬಾಸ್ ಕನ್ನಡ ಸೀಸನ್ 6 ಕ್ಕೆ ಪ್ರವೇಶ ಮಾಡಲಿದ್ದಾರೆ ಪ್ರತಿನಿತ್ಯ ರಾತ್ರಿ 7:00ಗೆ OTTನಲ್ಲಿ ಒಂದುವರೆ ಗಂಟೆಯ ಕಾಲ ಹೈಲೈಟ್ ಸಂಚಿಕೆಯನ್ನ ವೀಕ್ಷಣೆ ಮಾಡಬಹುದು ಅಲ್ಲದೆ ಕಾರ್ಯಕ್ರಮದ ವಿಜೇತರು ಹಾಗೂ ಪ್ರತಿಯೊಬ್ಬರಿಗೂ ಬಿಗ್ ಬಾಸ್ ಕನ್ನಡ ಸೀಸನ್ ನೈನ್ ನೇರ ಪ್ರವೇಶವನ್ನು ಪಡೆಯಲಿದ್ದಾರೆ.

ಇನ್ನು ಬಿಗ್ ಬಾಸ್ ಮನೆಗೆ ಕೆಲ ನಟಿಯರು ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ ಇದರಲ್ಲಿ, ನಾಗಿಣಿ ಧಾರವಾಹಿ ಖ್ಯಾತಿಯ ನಮೃತ ಗೌಡ, ನಟಿ ರೇಖಾ, ನವೀನ್ ಕೃಷ್ಣ, ತರುಣ್ ಚಂದ್ರ, ಪತ್ರಕರ್ತ ಚಂದನ್ ಶರ್ಮ, ದಿಲೀಪ್ ರಾಜ್, ರವೀಶ್ ಶ್ರೀವಾಸ್ತವ್ ಸೋನು ಶ್ರೀನಿವಾಸ್ ಗೌಡ, ಪತ್ರಕರ್ತ ಸೋಮಣ್ಣ ಮಾಚಿ ಮಾಡ, ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಕಾಫಿ ನಾಡು ಚಂದು ಹೆಸರು ಕೂಡ ವೈರಲ್ ಆಗುತ್ತಿದೆ ಆದರೆ ಇದರಲ್ಲಿ ಯಾರು ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಈ ಬಾರಿ ಬಿಗ್ ಬಾಸ್ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು ಆದರೆ ಈ ಬಾರಿ OTTಯಲ್ಲಿ ಮೊದಲ ಬಾರಿಗೆ ಪ್ರಸಾರವಾಗುತ್ತಿದೆ. ಆರು ವಾರಗಳ ಕಾಲ ನಡೆಯುವ ಶೋನಲ್ಲಿ ಯಾರು ಭಾಗವಹಿಸಲಿದ್ದಾರೆ ಎಂಬ ಕುತೂಹಲ ಮೂಡುತ್ತಿದೆ ಪ್ರತಿ ಬಾರಿ ಬಿಗ್ ಬಾಸ್ ಆರಂಭವಾಗುವ ಮನೆಗೆ ಹೊಸ ರೀತಿಯ ಲುಕ್ ನೀಡಲಾಗುತ್ತದೆ ಈ ಬಾರಿಯೂ ಅಷ್ಟೇ ಚೆನ್ನಾಗಿ ವಿನ್ಯಾಸ ಮಾಡಲಾಗಿದೆ. ಕಲರ್ಸ್ ಕನ್ನಡದ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಟ್ಕಲ್ ಅವರು ಬಿಗ್ ಬಾಸ್ ಮನೆಯ ಫೋಟೋಗಳನ್ನು ತಮ್ಮ Instagram ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!