ಹರಿದಾಡುತ್ತಿದೆ ಬಿಗ್ ಬಾಸ್ ಸ್ಪರ್ಧಿಗಳ ಹೆಸರುಗಳು

ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಆರಂಭಕ್ಕೂ ಮುನ್ನವೇ ಸ್ಪರ್ಧಿಗಳ ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ಬಾರಿ ಬಿಗ್ ಬಾಸ್ ಗೆ 18 ಸ್ಪರ್ಧಿಗಳ ಹೆಸರು ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ  ಕೆಲವೇ ದಿನಗಳು ಬಾಕಿ ಇವೆ. ಶೋ ನಿರೂಪಕ  ಕಿಚ್ಚ ಸುದೀಪ್ ಈ ಬಾರಿಯೂ ಕಾರ್ಯಕ್ರಮ ನಡೆಸಿಕೊಡಲು ಸಜ್ಜಾಗಿದ್ದಾರೆ.

ಧಾರಾವಾಹಿ ನಟ ಸಾಗರ್ ಬಿಲ್ಲಿಗೌಡ, ನಟಿ ಶ್ವೇತಾ ಪ್ರಸಾದ್, ಸಂಜನಾ ಬುರ್ಲಿ, ಸುದ್ದಿ ನಿರೂಪಕಿ ದಿವ್ಯಾ ವಸಂತ್, ಸೋಶಿಯಲ್ ಮೀಡಿಯಾದ ಸ್ಯಾಮ್ ಸಮೀರ್, ‘ಡಾಕ್ಟರ್ ಬ್ರೋ’  ಗಗನ್ , ವರುಣ್ ಆರಾಧ್ಯ, ಗಗನಾ ಭಾರಿ, ಧಾರಾವಾಹಿ ನಟ ವಿಜಯ್ ಸೂರ್ಯ ಹೆಸರುಗಳು  ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ದೀಪಿಕಾ ಗೌಡ, ಅಮೃತಾ ರಾಮಮೂರ್ತಿ, ಸಿಂಗರ್ ಸುನೀಲ್, ಬಾಳು ಬೆಳಗುಂದಿ, ಧನುಶ್ ಮತ್ತು ಸ್ವಾತಿ ಹೆಸರುಗಳೂ ಪಟ್ಟಿಯಲ್ಲಿ ಇವೆ. ಈ ಹೆಸರುಗಳು ಅಧಿಕೃತವಾಗಿಲ್ಲ. ಶೋ ಆರಂಭವಾದ ನಂತರವೇ ಸ್ಪರ್ಧಿಗಳ ನಿಜವಾದ ಹೆಸರುಗಳು ಬಹಿರಂಗವಾಗಲಿದೆ.

ಬಿಗ್ ಬಾಸ್ ಶೋ ಆರಂಭಕ್ಕೂ ಮೊದಲು ಒಂದಷ್ಟು ಹೆಸರುಗಳು ಓಡಾಡುತ್ತವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!