ಬಿಗ್ ಬಾಸ್ ಕನ್ನಡ 9ನೇ ಆವೃತ್ತಿಯ 13ನೇ ವಾರ ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್ ಎಲಿಮಿನೇಟ್ ಆಗಿದ್ದು, ಮನೆಯಲ್ಲಿ ಕೊನೆಯ ವಾರ 6 ಮಂದಿ ಉಳಿದಿದ್ದಾರೆ.
ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದೀಪಿಕಾ ದಾಸ್, ದಿವ್ಯಾ ಉರುಡುಗ, ಆರ್ಯವರ್ಧನ್ ಅಂತಿಮ ವಾರಕ್ಕೆ ಕಾಲಿಟ್ಟಿದ್ದಾರೆ.
ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್ ಮನೆಯ ಪ್ರಬಲ ಸ್ಪರ್ಧಿಗಳೆಂದೇ ಗುರುತಿಸಿಕೊಂಡಿದ್ದರು.
ಅರುಣ್ ಸಾಗರ್ ತಮ್ಮ ಕಾಮಿಡಿಗಳ ಮೂಲಕ ಗಮನ ಸೆಳೆದಿದ್ದರು. ವಿಶಿಷ್ಟ ವೇಷಗಳನ್ನು ತೊಟ್ಟು ಭಿನ್ನವಾಗಿ ಕಾಣಿಸುತ್ತಿದ್ದರು. ಕೈಗೆ ಗಾಯ ಮಾಡಿಕೊಂಡರೂ ಟಾಸ್ಕ್‌ಗಳಲ್ಲಿ ಸ್ಪರ್ಧೆ ಮಾಡುತ್ತಿದ್ದರು.
ಯಾರು ಬಿಗ್ ಬಾಸ್ ಜಯಿಸುತ್ತಾರೆ ಎನ್ನುವುದಕ್ಕೆ ಕ್ಷಣ ಗಣನೆ ಆರಂಭ ಆಗಿದೆ.
__

Be the first to comment