ಬಿಡುಗಡೆ ಮುಂಚೆ ಆಪರೇಶನ್ ನಕ್ಷತ್ರಕ್ಕೆ ಬೇಡಿಕೆ

ಒಂದಷ್ಟು ಸಿನಿಮಾಗಳು ಬಿಡುಗಡೆ ಮುಂಚೆ ತಂಡಕ್ಕೆ ನೆಮ್ಮದಿ ತಂದುಕೊಡುತ್ತದೆ.ಆ ಸಾಲಿಗೆ ‘ಆಪರೇಶನ್ ನಕ್ಷತ್ರ’ ಚಿತ್ರವು ಸೇರ್ಪಡೆಯಾಗಿದೆ. ಇಂಟರ್‍ನೆಟ್ ಮೂವಿ ಡೇಟಾ ಬೇಸ್ (ಐಎಂಡಿಬಿ) ಸಂಸ್ಥೆಯು ಈ ವರ್ಷದಲ್ಲಿ ಹತ್ತುಕನ್ನಡ ಚಿತ್ರಗಳನ್ನು ಉತ್ತಮ ಸಿನಿಮಾವೆಂದು ಹೇಳಿಕೊಂಡಿದ್ದು, ಅದರಲ್ಲಿಇದು ಸೇರಿದೆ. ಎರಡನೆಯದಾಗಿಟೀಸರ್,ಟ್ರೈಲರ್ ವೀಕ್ಷಿಸಿರುವ ಟಾಲಿವುಡ್ ನಿರ್ಮಾಪಕರೊಬ್ಬರು ರಿಮೇಕ್ ಮಾಡಲು ಉತ್ಸುಕರಾಗಿದ್ದು, ಸದ್ಯದಲ್ಲೆ ಸಿನಿಮಾ ನೋಡುವುದಾಗಿ ಹೇಳಿದ್ದಾರೆ.

ಇಂತಹ ಸಕರಾತ್ಮಕ ಬೆಳವಣಿಗೆಯಿಂದ ಐವರು ನಿರ್ಮಾಪಕ, ನಿರ್ದೇಶಕರಿಗೆ ಖುಷಿ ತಂದುಕೊಟ್ಟಿದೆ. ಸಿನಿಮಾ ಕುರಿತು ಹೇಳುವುದಾದರೆ ನಾವು ಒಬ್ಬರಿಗೆ ಯಾಮಾರಿಸಿದರೆ, ಬೇರೆಯವರಿಂದ ನಾವುಗಳು ಯಾವರೀತಿ ಮೋಸ ಹೋಗುತ್ತೇವೆ. ಎಲ್ಲಿಯವರೆವಿಗೂ ಮೋಸ ಮಾಡುವವರು ಇರುತ್ತಾರೋ, ಅಲ್ಲಿಯವರೆಗೂ ಇದೆಲ್ಲವೂ ನಡೆಯುತ್ತಲೇಇರುತ್ತದೆ. ನಿಸ್ವಾರ್ಥ ಮುಖವಾಡಗಳ ಮಧ್ಯೆ ಸ್ವಾರ್ಥ ಮನಸ್ಸು ಇದ್ದವರಿಗೆದುಡ್ಡು ಬಂದಾಗ ಏನಾಗುತ್ತಾರೆ ಎಂಬುದು ಸಿನಿಮಾದ ಸಾರಾಂಶವಾಗಿದೆ.

ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಮಧುಸೂಧನ್.ಕೆ.ಆರ್. ಮೈಂಡ್ ಗೇಮ್ ಕತೆಯಲ್ಲಿ ನಾಲ್ಕು ಪಾತ್ರಗಳು ಜೀವಾಳವಾಗಿದೆ. ಕೆಲವೊಂದು ಘಟನೆಗಳು ಅವರ ಬದುಕಿನಲ್ಲಿ ಬಂದಾಗ, ಅವರುಗಳ ಮನಸ್ಥಿತಿ ಹೇಗಿರುತ್ತದೆ. ಇದನ್ನು ಯಾವರೀತಿಯಲ್ಲಿ ಎದುರಿಸುತ್ತಾರೆಂದು ಕಾಲ್ಪನಿಕ ವಾಗಿತೋರಿಸಲಾಗಿದೆ. ಪೂರ್ಣ ಮನರಂಜನೆ ಇರುವುದರಿಂದ ಸಂದೇಶಅಂತ ಇರುವುದಿಲ್ಲವಂತೆ.

ಮುಖ್ಯ ಪಾತ್ರದಲ್ಲಿ ನಿರಂಜನ್ ಒಡೆಯರ್, ಅದಿತಿಪ್ರಭುದೇವ, ಯಜ್ಘಾಶೆಟ್ಟಿ, ಲಿಖಿತ್ ಸೂರ್ಯ ಇವರೆಲ್ಲರಿಗೂ ಎರಡು ಶೇಡ್‍ಗಳು ಇರಲಿದೆ. ಉಳಿದಂತೆ ಅಮಾಯಕನಾಗಿ ಮೋಸಹೋಗುವ ಕಾಮಿಡಿಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ, ಭ್ರಷ್ಟ ಆಯುಕ್ತರಾಗಿ ಪ್ರಶಾಂತ್ ನಟನ, ಶ್ರೀನಿವಾಸಮೂರ್ತಿ, ದೀಪಕ್‍ರಾಜ್ ಶೆಟ್ಟಿ, ವಿಕ್ಟರಿವಾಸು ಮುಂತಾದವರು ಅಭಿನಯಿಸಿದ್ದಾರೆ. ಹಿರಿಯ ಪತ್ರಕರ್ತ ವಿಜಯ ಭರಮಸಾಗರ ಸಾಹಿತ್ಯದಎರಡು ಗೀತೆಗಳಿಗೆ ವೀರಸಮರ್ಥರಾಗ ಸಂಯೋಜಿಸಿದ್ದು, ಮೊದಲ ಪ್ರಯತ್ನ ಎನ್ನುವಂತೆ ಕ್ರಾಕ್ ಮಾದರಿಯಲ್ಲಿ ಸಂಗೀತ ಒದಗಿಸಿರುವುದು ವಿಶೇಷ. ಛಾಯಾಗ್ರಹಣ ಶಿವಸೀನು, ಸಂಕಲನ ಅರ್ಜುನ್‍ಕಿಟ್ಟು ನಿರ್ವಹಿಸಿದ್ದಾರೆ. ಗೆಳಯರುಗಳಾದ ಎನ್.ನಂದಕುಮಾರ್, ಅರವಿಂದಮೂರ್ತಿ, ಟಿ.ಎಸ್.ರಾಧಕೃಷ್ಣ ಹಾಗೂ ಸಿ.ಎಸ್.ಕಿಶೋರ್ ಮೇಗಳ ಮನೆ ಜಂಟಿಯಾಗಿ ಫೈವ್ ಸ್ಟಾರ್ ಸಂಸ್ಥೆ ಹುಟ್ಟುಹಾಕಿ ಇದರ ಮೂಲಕ ಸಿನಿಮಾಕ್ಕೆ ಹಣ ಹೂಡಿದ್ದಾರೆ. ವಿತರಕ ವಿಜಯ್ ಇದೇ ಶುಕ್ರವಾರದಂದು ಸುಮಾರು ಎಂಬತ್ತು ಕೇಂದ್ರಗಳಲ್ಲಿ ಜನರಿಗೆ ತೋರಿಸಲು ಯೋಜನೆ ಹಾಕಿಕೊಂಡಿದ್ದರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!