ಕನ್ನಡ ಚಿತ್ರರಂಗದಲ್ಲಿ ಚರಿತ್ರಿಯೆ ಪುಟಗಳನ್ನು ತಿರುವು ಹಾಕುವ ಸಮಯ ಆಗಾಗ್ಗೆ ನಡೆಯುತ್ತಲೆ ಇರುತ್ತದೆ. ಈಗ ಚಿತ್ರದುರ್ಗದ ಮದಕರಿ ವಂಶದ ‘ಬಿಚ್ಚುಗತ್ತಿ’ ಕುರಿತಾದ ಸಿನಿಮಾ ರಾಜವರ್ಧನ ಅವರ ಮೊದಲ ಐತಿಹಾಸಿಕ ಸಿನಿಮಾ ಹರಿಪ್ರಿಯಾ ನಟನೆಯ ಹರಿ ಸಂತೋಷ್ ನಿರ್ದೇಶನದ ಸಿನಿಮಾ ಈ ಶುಕ್ರವಾರ ಬಿಡುಗಡೆ ಆಗುತ್ತಿದೆ.
ಹೆಸರಾಂತ ಕಾದಂಬರಿಕಾರ ಬಿ ಎಲ್ ವೇಣು ಅವರ ‘ದಳವಾಯಿ ಮುದ್ದಣ್ಣ’ ಕಾದಂಬರಿ ಆಧಾರಿತ ಚಿತ್ರಕ್ಕೆ ಅವರದೇ ಚಿತ್ರಕಥೆ ಭಾಗ ೧ ಆಗಿ ಮೂಡಿಬರುತ್ತಿದೆ. ಮೋಹಕ ತಾರೆ ಹರಿಪ್ರಿಯಾ ನಾಯಕಿ ಸಿದ್ದಾಂಬೆ ಪಾತ್ರ ನಿರ್ವಹಿಸಿದ್ದಾರೆ. ಬಾಹುಬಲಿ ಖ್ಯಾತಿಯ ಪ್ರಭಾಕರ್ ಈ ಚಿತ್ರದ ಪ್ರಮುಖ ವಿಲನ್. ಶ್ರೀನಿವಾಸಮೂರ್ತಿ, ಶರತ್ ಲೋಹಿತಾಶ್ವ, ಕಲ್ಯಾಣಿ, ಶಿವರಾಮಣ್ಣ, ರೇಖ, ರಮೇಶ್ ಪಂಡಿತ್, ದಿಂಗ್ರಿ ನಾಗರಾಜ್, ಪ್ರಕಾಷ್ ಹೆಗ್ಗೊಡು, ಸುನೇತ್ರ ಪಂಡಿತ್, ಉಗ್ರಂ ಮಂಜು ತಾರಗಣದಲ್ಲಿದ್ದಾರೆ.ಆರು ಸಾಹಸ ಶನಿವೇಶಗಳನ್ನು ಡಾ ರವಿ ವರ್ಮಾ, ವಿಜಯ್, ವಿನೋದ್. ಸಣ್ಣಪ್ಪ ಹಾಗೂ ವಿಕ್ರಮ್ ನಿರ್ವಹಿಸಿದ್ದಾರೆ. ಶ್ರೀ ಕೃಷ್ಣ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾಕ್ಕೆ ಸಂಕಲನ ಕೆ ಎಂ ಪ್ರಕಾಶ್, ಎಡ್ವರ್ಡ್ ಕೆನಡಿ ಕಲಾ ನಿರ್ದೇಶನ, ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಗುರು ಪ್ರಶಾಂತ್ ಛಾಯಾಗ್ರಹಣ ಮಾಡಿದ್ದಾರೆ.
Be the first to comment