ಹಲೋ 123

ಭುವನ್ ಹೊಸ ಚಿತ್ರದ ಹೆಸರು ಹಲೋ 123

ಭುವನ್ ಪೊನ್ನಣ್ಣ ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ ನೀಡುತ್ತಿದ್ದು, ಚಿತ್ರದ ಶೀರ್ಷಿಕೆಯನ್ನು ಹಲೋ 123 ಎಂದು ನಿಗದಿ ಮಾಡಲಾಗಿದೆ.

ಅಮೃತ ಸಿನಿ ಕ್ರಾಫ್ಟ್ ಲಾಂಛನದಲ್ಲಿ ವಿಜಯ್ ತಾತಾ ಹಾಗೂ ಅಮೃತ ವಿಜಯ್ ತಾತಾ ನಿರ್ಮಾಣದಲ್ಲಿ ಚಿತ್ರ ಮೂಡಿ ಬರಲಿದೆ. ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡಲಿದ್ದಾರೆ. ಖ್ಯಾತ ಸಂಗೀತ ಮಾಂತ್ರಿಕ ವಿ ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಭುವನ್ ಪೊನ್ನಣ್ಣ ಹಾಗೂ ಹರ್ಷಿಕ ಅವರ ಪುತ್ರಿ ಶ್ರೀದೇವಿ ಅವರ ಹಸ್ತದಿಂದ ಚಿತ್ರಕ್ಕೆ ಚಾಲನೆ ನೀಡಲಾಯಿತು. ರಾಂಧವ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಭುವನ್ ಪೊನ್ನಣ್ಣ ಈ ಬಾರಿ ಹಲೋ 123 ಚಿತ್ರದ ಮೂಲಕ ಹೊಸ ಹೆಜ್ಜೆ ಇಡಲು ಮುಂದಾಗಿದ್ದಾರೆ.

ಹಲೋ 123

ನಿರ್ಮಾಪಕ ವಿಜಯ್ ತಾತಾ ಅವರ ಮನೆಯ ಆವರಣದಲ್ಲಿ ಅಧಿಕೃತವಾಗಿ ಸ್ಕ್ರಿಪ್ಟ್ ಪೂಜೆ ಹಾಗೂ ಶೀರ್ಷಿಕೆ ಅನಾವರಣ ಮಾಡಲಾಯಿತು. ದೇವರಿಗೆ ಪೂಜೆ ಮಾಡುವ ಮೂಲಕ ನಿರ್ಮಾಪಕ ವಿಜಯ್ ತಾತಾ ಅವರು ಚಿತ್ರಕ್ಕೆ ಚಾಲನೆ ನೀಡಿದರು. ನಂತರ ನಾಯಕ ಭುವನ್, ನಿರ್ದೇಶಕ ಯೋಗರಾಜ್ ಭಟ್ ಹಾಗೂ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರಿಗೆ ಅಡ್ವಾನ್ಸ್ ಕೊಟ್ಟು ಶುಭ ಕೋರಿದರು.

ಯೋಗರಾಜ್ ಭಟ್ ಅವರು ಅಮೆರಿಕ ಪ್ರವಾಸ ಹೊರಟಿದ್ದು, ಅಲ್ಲಿಂದ ಹಿಂತಿರುಗಿದ ಬಳಿಕ ಚಿತ್ರದ ಕೆಲಸಗಳು ಆರಂಭವಾಗಲಿವೆ. ಅಕ್ಟೋಬರ್ ನಲ್ಲಿ ಸಿನಿಮಾದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಮುಂದಿನ ವರ್ಷ ಮಾರ್ಚ್ ವೇಳೆಗೆ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಹಲೋ 123

Be the first to comment

Leave a Reply

Your email address will not be published. Required fields are marked *

Translate »
error: Content is protected !!