ಫೆ.14ಕ್ಕೆ ‘ಭುವನಂ ಗಗನಂ’ ಬಿಡುಗಡೆ

ಪೃಥ್ವಿ ಅಂಬರ್‌ ಹಾಗೂ ಪ್ರಮೋದ್‌ ತಾರಾಬಳಗದ  ‘ಭುವನಂ ಗಗನಂ’ ಚಿತ್ರ ಫೆ.14ಕ್ಕೆ ಬಿಡುಗಡೆಗೆ ಸಜ್ಜಾಗಿದೆ.

ಚಿತ್ರದ ಟ್ರೇಲರ್ ಬಿಡುಗಡೆ  ಜಿಟಿ ಮಾಲ್ ನಲ್ಲಿ ನಡೆಯಿತು. ನಟರಾದ ಡಾರ್ಲಿಂಗ್ ಕೃಷ್ಣ, ನೀನಾಸಂ ಸತೀಶ್, ನಟಿಯರಾದ ಪವನ ಗೌಡ, ಸಾನ್ಯಾ ಅಯ್ಯರ್, ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ, ತ್ರಿವಿಕ್ರಮ್, ಅನುಷಾ ರೈ, ಹಾಸ್ಯನಟ ಶಿವರಾಜ್ ಕೆ ಆರ್ ಪೇಟೆ, ನಿರ್ದೇಶಕ ಚೇತನ್ ಕುಮಾರ್,  ಸಂಭಾಷಣೆ ಬರಹಗಾರ ಮಾಸ್ತಿ  ಇತರರು ಸಾಥ್ ನೀಡಿದರು.

ಭುವನಂ ಗಗನಂ ಸಿನಿಮಾದ ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರತಂಡ ಇತ್ತೀಚೆಗೆ ದುಬೈನಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಶೋನಲ್ಲಿ ದುಬೈ ಕನ್ನಡಿಗರು ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಎರಡು ಮುಗ್ದ ಮನಸ್ಸುಗಳ ಪಯಣದ ಚಿತ್ರ ಭುವನಂ ಗಗನಂ. ಪ್ರಮೋದ್ ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸಿದ್ದಾರೆ. ಗಿರೀಶ್ ಮೂಲಿಮನಿ  ಚಿತ್ರಕ್ಕೆ  ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ನಿರ್ಮಾಪಕ ಎಂ ಮುನೇಗೌಡ ತಮ್ಮ  ಎಸ್ ವಿಸಿ ಫಿಲ್ಮಂಸ್ ಪ್ರೊಡಕ್ಷನ್ ನಡಿ  ಚಿತ್ರಕ್ಕೆ ಹಣ ಹಾಕಿದ್ದಾರೆ.

ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ. ಉದಯ್ ಲೀಲಾ ಕ್ಯಾಮೆರಾ , ಗುಮ್ಮಿನೇನಿ ವಿಜಯ್  ಮ್ಯೂಸಿಕ್ , ಸುನೀಲ್ ಕಶ್ಯಪ್ ಸಂಕಲನ, ಗಿರೀಶ್ ಮೂಲಿಮನಿ, ಪ್ರಸನ್ನ ವಿ ಸಂಭಾಷಣೆ ಸಿನಿಮಾಕ್ಕಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!