‘ಭ್ರಮೆ’ಚಿತ್ರದ 10 ಸಾವಿರ ಟಿಕೆಟ್‌ ಸೇಲ್‌ : ಅದೃಷ್ಟವಂತರಿಗೆ ಕೈಸೇರಲಿದೆ ಬಹುಮಾನ!

ನೈಜ ಘಟನೆಯೊಂದನ್ನು ಆಧಾರಾವಾಗಿಟ್ಟುಕೊಂಡು ಸೈಕಲಾಜಿಕಲ್‌ ಹಾರಾರ್‌ ಸಿನಿಮಾವನ್ನು ಹೊಸ ತಂಡ ನಿರ್ಮಿಸಿದೆ. ನವೆಂಬರ್‌ 1 ರಂದು ಓಟಿಟಿ ಫ್ಲ್ಯಾಟ್‌ ಫಾರ್ಮ್‌ ನಲ್ಲಿ ರಿಲೀಸ್‌ ಮಾಡಲಾಗುತ್ತಿದೆ. ಈಗಾಗಲೇ ಸಿನಿಮಾದ 10 ಸಾವಿರ ಟಿಕೇಟ್‌ ಸೇಲ್‌ ಆಗಿದೆ. ಈ ಖುಷಿಯನ್ನ ಹಂಚಿಕೊಳ್ಳುವುದಕ್ಕೆ ಚಿತ್ರತಂಡ ಸಿದ್ಧವಾಗಿದೆ.

ಸಿನಿಮಾ ನೋಡುವುದರ ಜೊತೆಗೆ ಸಿನಿಪ್ರೇಕ್ಷಕರಿಗೆ ಉಡುಗೊರೆಯನ್ನು ಈ ಚಿತ್ರತಂಡ ನೀಡುತ್ತಿದೆ. ಸಿನಿಮಾ ಒಂದು ಟಿಕೆಟ್‌ ಗೆ 99 ರೂಪಾಯಿ ನಿಗದಿ ಮಾಡಿತ್ತು. ಸಾವಿರ ಟಿಕೆಟ್‌ ನಲ್ಲಿ ಒಬ್ಬರಿಗೆ ಟ್ಯಾಬ್‌, 10 ಸಾವಿರ ಟಿಕೆಟ್‌ ನಲ್ಲಿ ದ್ವಿಚಕ್ರ ವಾಹನ ನೀಡುವಂತೆ ಹೇಳಿಕೊಂಡಿತ್ತು. ಅದರಂತೆ ಇದೀಗ 10 ಸಾವಿರ ಸಿನಿಮಾ ಟಿಕೇಟ್‌ ಗಳು ಸೇಲಾಗಿದ್ದು, ಲಕ್ಕಿ ಡ್ರಾ ಮೂಲಕ ಅದೃಷ್ಟವಂತರಿಗೆ ಬೈಕ್‌ ಉಡುಗೊರೆ ನೀಡಲು ಚಿತ್ರತಂಡ ಸಿದ್ಧವಾಗಿದೆ.

ಅಕ್ಟೋಬರ್‌ 2 ರಂದು ರೇಣುಕಾಂಬ ಡಿಜಿಟಲ್‌ ಸ್ಟುಡಿಯೋದಲ್ಲಿ ಆಡಿಯೋ ಲಾಂಚ್‌ ಮಾಡಲಾಗುತ್ತಿದೆ. ಈ ವೇಳೆ ಲಕ್ಕಿ ಡ್ರಾ ಮಾಡಿ, ಅದೃಷ್ಟವಂತರಿಗೆ ಅಲ್ಲಿಯೇ ಬಹುಮಾನ ವಿತರಿಸಲಿದ್ದಾರೆ. ಈಗಾಗಲೇ ಟಿಕೆಟ್‌ ತೆಗೆದುಕೊಂಡಿರುವವರಲ್ಲಿ ಖುಷಿ ಹೆಚ್ಚಾಗಿದೆ. ಆ ಲಕ್ಕಿ ಪರ್ಸನ್‌ ನಾನೇ ಆಗಿರಬಹುದಾ ಎಂಬೆಲ್ಲಾ ಕುತೂಹಲ ಮನಸ್ಸಲ್ಲೇ ಮೂಡಿರುತ್ತೆ. ಅಕ್ಬೋಬರ್‌ 2 ರಂದು ಇದಕ್ಕೆಲ್ಲಾ ಉತ್ತರ ಸಿಗಲಿದೆ. ಸಿನಿ ತಂಡ ಇನ್ನು ಹೆಚ್ಚೆಚ್ಚು ಬಹುಮಾನಗಳನ್ನು ಇಟ್ಟಿದ್ದಾರೆ. ಬೈಕ್‌ ಗೆಲ್ಲಲಿಲ್ಲ ಅಂದ್ರೆ ಏನಂತೆ, ಕಾರು ಕೂಡ ಗೆಲ್ಲಬಹುದು. ಕಾರಿನ ಅದೃಷ್ಟಶಾಲಿಗಳು ನೀವಾಗಬೇಕು ಅಂದ್ರೆ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ, ಟಿಕೆಟ್‌ ಬುಕ್‌ ಮಾಡಿ.

ಈಗಾಗಲೇ ಸಿನಿಮಾರಂಗದಲ್ಲಿ ಅನುಭವ ಪಡೆದಿರುವ ಚರಣ್‌ ರಾಜ್‌ ಮೊದಲ ಬಾರಿಗೆ ಭ್ರಮೆ ಮೂಲಕ ನಿರ್ದೇಶನ ಮಾಡಿದ್ದಾರೆ. ಹಿರಿಯ ನಿರ್ದೇಶಕ ತಿಪಟೂರು ರಘು ಅವರ ಮಗ ಈ ಸಿನಿಮಾದ ಮೂಲಕ ನಾಯಕನಾಗಿ ಸ್ಯಾಂಡಲ್‌ ವುಡ್‌ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅಂಜನಾ ಗೌಡ, ಇಶಾನಾ ನಾಯಕಿಯರಾಗಿದ್ದಾರೆ. ನಮ್ಮ ಫ್ಲಿಕ್ಸ್‌ ನಲ್ಲಿ ನವೆಂಬರ್‌ 1 ರಂದು ಸಿನಿಮಾ ರಿಲೀಸ್‌ ಆಗುತ್ತಿದ್ದು, ಈ ಆಪ್‌ ಡೌನ್‌ ಲೋಡ್‌ ಮಾಡಿಕೊಂಡು, ಟಿಕೆಟ್‌ ನಲ್ಲಿರುವ ಕೋಡ್‌ ಟೈಪ್‌ ಮಾಡಿ ಸಿನಿಮಾ ನೋಡಿ.

This Article Has 2 Comments
  1. Pingback: this article

  2. Pingback: DevOps Outsourcing Areas

Leave a Reply

Your email address will not be published. Required fields are marked *

Translate »
error: Content is protected !!