ಬಿಗ್ ಬಾಸ್ ಖ್ಯಾತಿಯ ಕಿನ್ನರಿ ನಟಿ ಭೂಮಿ ಶೆಟ್ಟಿ ಕುಸ್ತಿಪಟು ಆಗಿ ಕೆಂಡದ ಸೆರಗು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದಲ್ಲಿ ಹೆಣ್ಣಿನ ಮೇಲೆ ಆಗುವ ಶೋಷಣೆಯ ಸುತ್ತ ಕಥೆ ಇದೆ. ಹೆಣ್ಣುಮಕ್ಕಳ ಹಕ್ಕುಗಳ ಮೇಲೂ ಇಲ್ಲಿ ಬೆಳಕು ಚೆಲ್ಲಲಾಗಿದೆ.
ಈ ಚಿತ್ರದಲ್ಲಿ ರಿಯಲ್ ಆಗಿಯೇ ಭೂಮಿ ಶೆಟ್ಟಿ ಕುಸ್ತಿ ಆಡಿದ್ದಾರೆ. ದಾವಣಗೆರೆಯ ಕುಸ್ತಿ ಪಟುಗಳಿಂದಲೇ ಸೂಕ್ತ ತರಬೇತಿಯನ್ನೂ ಪಡೆದುಕೊಂಡು ಅಖಾಡಕ್ಕೆ ಇಳಿದಿದ್ದಾರೆ. ಚಿತ್ರಕ್ಕಾಗಿಯೇ ಕುಸ್ತಿಯನ್ನ ಕಲಿತಿರೋ ಭೂಮಿ ಶೆಟ್ಟಿ ಅದರ ಬಗ್ಗೆ ಒಲವನ್ನೂ ಹೆಚ್ಚಿಸಿಕೊಂಡಿದ್ದಾರೆ.
ದಾವಣಗೆರೆಯಲ್ಲಿ ಕೆಂಡದ ಸೆರಗು ಸಿನಿಮಾದ ಚಿತ್ರೀಕರಣ ಆಗಿದೆ. 15 ದಿನದ ಚಿತ್ರೀಕರಣ ಇಲ್ಲಿಯೇ ಆಗಿದೆ. ರಿಯಲ್ ಅಖಾಡದಲ್ಲಿ ರೀಲ್ ಗಾಗಿಯೇ ನಟಿ ಭೂಮಿ ಶೆಟ್ಟಿಯ ಕುಸ್ತಿಯ ಪಟ್ಟುಗಳನ್ನ ಚಿತ್ರೀಕರಣ ಮಾಡಲಾಗಿದೆ. ಅಖಾಡದಲ್ಲಿಯೇ ಚಿತ್ರದ ಹಾಡಿನ ಚಿತ್ರೀಕರಣ ಮಾಡಲಾಗಿದೆ.
ನಿರ್ದೇಶಕ ರಾಕಿ ಸೋಮ್ಲಿ ನಿರ್ದೇಶನದ ಈ ಚಿತ್ರ ರಾಕಿ ಸೋಮ್ಲಿ ಬರೆದ ಕೆಂಡದ ಸೆರಗು ಕಾದಂಬರಿ ಆಧರಿಸಿದೆ.
ಈ ಚಿತ್ರದಲ್ಲಿ ಭೂಮಿ ಶೆಟ್ಟಿ ಪಾತ್ರದ ಹೆಸರು ಪವಿತ್ರಾ ಆಗಿದೆ. ತಾಯಿಯ ಪಾತ್ರದಲ್ಲಿ ಶೋಭಿತಾ ಅಭಿನಯಿಸಿದ್ದಾರೆ. ಚಿತ್ರದ ಇತರ ಪಾತ್ರದಲ್ಲಿ ವರ್ಧನ್, ಯಶ್ ಶೆಟ್ಟಿ ಅಭಿನಯಿಸಿದ್ದಾರೆ. ಚಿತ್ರದ ಚಿತ್ರೀಕರಣ ಒಂದು ಹಂತಕ್ಕೆ ಪೂರ್ಣಗೊಂಡಿದೆ.
___

Be the first to comment