Bheema ಭೀಮ ಫಸ್ಟ್‌ ಲುಕ್‌ ಟೀಸರ್‌ ರಿಲೀಸ್

ದುನಿಯಾ ವಿಜಿ ಅಭಿನಯಿಸಲಿರುವ ಭೀಮ ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ ಅವರ ಹುಟ್ಟು ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ.

ಭೀಮ ಚಿತ್ರದಲ್ಲಿ ದುನಿಯಾ ವಿಜಯ್ ರಗಡ್‌​ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್ತಿ ಬರೆದ ಖಡಕ್ ಡೈಲಾಗ್‌ಗಳು ಈ ಚಿತ್ರಕ್ಕೆ ಮತ್ತಷ್ಟು ಖದರ್‌ ತುಂಬಿವೆ.

ದುನಿಯಾ ವಿಜಯ್ ಅಭಿನಯದ ಭೀಮ ಚಿತ್ರದ ಟೀಸರ್ ಅಭಿಮಾನಿ ಗಳ ಮನ ಗೆಲ್ಲುತ್ತಿದೆ. ದುನಿಯಾ ವಿಜಯ್ ಈ ಚಿತ್ರದಲ್ಲಿ ಅಭಿನಟಿಸುವ ಜೊತೆಗೆ ಚಿತ್ರವನ್ನು ಅವರೇ ಡೈರೆಕ್ಟ್‌ ಮಾಡಿದ್ದಾರೆ.

ವಿಜಯ್‌ ಸಿನಿಲೈಫ್‌ಗೆ ಅವರ ನಿರ್ದೇಶನದ ಸಲಗ ಚಿತ್ರ ಟರ್ನಿಂಗ್‌ ಪಾಯಿಂಟ್‌ ಆಯಿತು. ಅಲ್ಲಿಂದ ಅವರ ಖದರ್‌ ಬದಲಾಯಿತು. ಇಲ್ಲಿವರೆಗೂ ಬ್ಲ್ಯಾಕ್ ಕೋಬ್ರಾ ಎಂದು ಕರೆಸಿಕೊಳ್ಳುತ್ತಿದ್ದ ವಿಜಯ್‌ ಈಗ ಸ್ಯಾಂಡಲ್‌ವುಡ್ ಸಲಗ ಎಂದು ಖ್ಯಾತರಾಗುತ್ತಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಬಾಲಯ್ಯನ ಚಿತ್ರದಲ್ಲಿ ದುನಿಯಾ ವಿಜಯ್‌ ನಟಿಸಿದ್ದಾರೆ. ನಟ ದುನಿಯಾ ವಿಜಯ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಮ್ಮ ಹುಟ್ಟೂರು ಕುಂಬಾರನಹಳ್ಳಿಯಲ್ಲಿ ಸಂಭ್ರಮದಿಂದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!