ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ ‘ಭೀಮ’ ಸಿನಿಮಾ ಗೌರಿ-ಗಣೇಶ ಹಬ್ಬಕ್ಕೆ ಒಟಿಟಿಗೆ ಬಂದಿದೆ.
ಸಿನಿಮಾ ಬಿಡುಗಡೆಯಾದ ಹೆಚ್ಚು ಕಡಿಮೆ ಒಂದು ತಿಂಗಳಿಗೆ ಅಮೆಜಾನ್ ಪ್ರೈಂನಲ್ಲಿ ಸಿನಿಮಾ ಲಗ್ಗೆ ಇಟ್ಟಿದೆ. ಬೆಂಗಳೂರಿನ ಡ್ರಗ್ ಮಾಫಿಯಾ ಸ್ಟೋರಿ ಸಿನಿಮಾವನ್ನು ಒಟಿಟಿಯಲ್ಲಿ ನೋಡಬಹುದಾಗಿದೆ.
‘ಭೀಮ’ ಮೂರು ವಾರಗಳಲ್ಲಿ ಬರೋಬ್ಬರಿ 24 ಕೋಟಿ ರೂ. ಗಳಿಕೆ ಕಂಡಿತ್ತು. ಹೊರ ರಾಜ್ಯದಲ್ಲಿಯೂ ಸಖತ್ ಹವಾ ಕ್ರಿಯೇಟ್ ಮಾಡಿತ್ತು. ಸ್ಯಾಂಡಲ್ವುಡ್ನಲ್ಲಿ ಸಿನಿಮಾಗಳು ಹಿಟ್ ಆಗದೇ ಇರುವ ಸಮಯದಲ್ಲಿ ಜನರನ್ನು ಚಿತ್ರಮಂದಿರಗಳಿಗೆ ಕರೆದುಕೊಂಡು ಬಂದಿದ್ದು ‘ಭೀಮ’ ಸಿನಿಮಾ. ಈ ಸಿನಿಮಾಗೆ ಎ ಸರ್ಟಿಫಿಕೆಟ್ ಸಿಕ್ಕಿತ್ತು.
ಚಿತ್ರಮಂದಿರಗಳಲ್ಲಿ ‘ಭೀಮ’ನ ಕಾರುಬಾರು ಜೋರಾಗಿತ್ತು. ರಜಾ ದಿನ ಅಲ್ಲದೇ ವಾರದ ದಿನದಲ್ಲಿ ಕೆಲವೆಡೆ ಶೋಗಳು ಹೌಸ್ಫುಲ್ ಆಗಿತ್ತು. ಸಂಜೆ ಮೇಲೆ ಶೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಬುಕ್ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ಗೂ ರೆಸ್ಪಾನ್ಸ್ ಚೆನ್ನಾಗಿತ್ತು.
ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣದ ‘ಭೀಮ’ ಚಿತ್ರದಲ್ಲಿ ಅನುಭವಿ ಕಲಾವಿದರ ಜೊತೆ ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಿತ್ತು. ಮಾಸ್ತಿ ಸಂಭಾಷಣೆ, ಚರಣ್ ರಾಜ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿ ಪ್ರೇಕ್ಷಕರನ್ನು ಸಿನಿಮಾ ರಂಜಿಸಿತ್ತು.
‘ಭೀಮ’ ದುನಿಯಾ ವಿಜಯ್ ನಿರ್ದೇಶಿಸಿರುವ ಎರಡನೇ ಸಿನಿಮಾ ಆಗಿದೆ. ‘ಸಲಗ’ ಸಿನಿಮಾ ಮೂಲಕ ಗೆಲುವು ಕಂಡ ದುನಿಯಾ ವಿಜಯ್ ಕಾಲಿವುಡ್ಗೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ. ಇದರ ಜತೆಗೆ ರಾಜ್ ಬಿ ಶೆಟ್ಟಿ ಹಾಗೂ ದುನಿಯಾ ವಿಜಯ್ ಚಿತ್ರವನ್ನು ಮಾಡಲು ಮುಂದಾಗಿದ್ದಾರೆ. ಈಗಾಗಲೇ ದುನಿಯಾ ವಿಜಯ್, ನಂದಮೂರಿ ಬಾಲಕೃಷ್ಣ ಅವರ ʻವೀರಸಿಂಹ ರೆಡ್ಡಿʼ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿ ಅಬ್ಬರಿಸಿದ್ದಾರೆ.
Be the first to comment