ದುನಿಯಾ ವಿಜಯ್ ಅಭಿನಯದ ‘ಭೀಮ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ A ಪ್ರಮಾಣ ಪತ್ರ ಕೊಟ್ಟಿದೆ.
ಭೀಮ ಚಿತ್ರದಲ್ಲಿ ಭರ್ಜರಿ ಐದು ಆಕ್ಷನ್ ಸಿಕ್ವೆನ್ಸ್ ಬರುತ್ತದೆ. ಹಾಗಾಗಿಯೇ ಚಿತ್ರಕ್ಕೆ A ಪ್ರಮಾಣ ಬಂದಿರಬಹುದು ಎಂದು ನಿರ್ಮಾಪಕ ಜಗದೀಶ್ ಹೇಳಿದ್ದಾರೆ. ಸಿನಿಮಾದಲ್ಲಿ ಸಾಮಾಜಿಕ ಕಳಕಳಿ ಇದೆ. ಸೆನ್ಸಿಬಲ್ ಆಗಿಯೇ ದುನಿಯಾ ವಿಜಯ್ ಭೀಮ ಚಿತ್ರದ ಕಥೆ ಮಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಚರಣ್ ರಾಜ್ ಹೇಳಿದ್ದಾರೆ.
‘ಭೀಮ’ ಚಿತ್ರದಲ್ಲಿ ಒಳ್ಳೆ ಡೈಲಾಗ್ ಕೂಡ ಇವೆ. ಆದರೆ ಇವುಗಳಿಗೆ ಸೆನ್ಸಾರ್ ಅಲ್ಲಲ್ಲಿ ಮ್ಯೂಟ್ ಕೂಡ ಕೊಟ್ಟಿದೆ. ದುನಿಯಾ ವಿಜಯ್ ಈ ಹಿಂದೆ ಸಲಗ ಸಿನಿಮಾ ಮಾಡಿದ್ದರು. ಇದಕ್ಕೆ ಇವರೇ ಡೈರೆಕ್ಟರ್, ನಾಯಕರೂ ಆಗಿದ್ದರು. ಸೆನ್ಸಾರ್ ಮಂಡಳಿ ಈ ಚಿತ್ರಕ್ಕೂ A ಪ್ರಮಾಣ ಪತ್ರ ಕೊಟ್ಟಿತ್ತು.
ಭೀಮ ಚಿತ್ರಕ್ಕಾಗಿ ದುನಿಯಾ ವಿಜಯ್ ರಿಸರ್ಚ್ ವರ್ಕ್ ಮಾಡಿದ್ದಾರೆ. ರಿಯಲ್ ಪಾತ್ರಗಳನ್ನ ಸಂದರ್ಶನ ಮಾಡಿ ಚಿತ್ರದ ಕಥೆ ಮಾಡಿದ್ದಾರೆ. ದುನಿಯಾ ವಿಜಯ್ ತಮ್ಮ ಭೀಮ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಆಗಸ್ಟ್ ಮೊದಲ ವಾರದಲ್ಲಿ ಪ್ಲಾನ್ ಮಾಡಿದ್ದಾರೆ. ಆ ದಿನವೇ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ.
ಭೀಮ ಸಿನಿಮಾ ಆಗಸ್ಟ್-9 ರಂದು 400 ಥೀಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. ಹೊರ ರಾಜ್ಯ ಹಾಗೂ ಹೊರದೇಶದಲ್ಲೂ ಈ ಸಿನಿಮಾ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲಿ ಕೆ.ಆರ್.ಜಿ ಸಂಸ್ಥೆ ಭೀಮ ಚಿತ್ರ ವಿತರಿಸುತ್ತಿದೆ.
Be the first to comment