ಕಿರಣ್ ರಾಜ್ ಅವರ ‘ಕರ್ಣ’ ಹೆಸರಿನ ಧಾರಾವಾಹಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿ ಭವ್ಯಾ ಗೌಡ ನಾಯಕಿ ಎಂದು ವರದಿ ಆಗಿದೆ.
ಕಿರಣ್ ರಾಜ್ ಅವರು ಕಲರ್ಸ್ ಕನ್ನಡದಲ್ಲಿ ಈ ಮೊದಲು ಪ್ರಸಾರ ಕಂಡ ‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಹೆಸರಿನ ಪಾತ್ರ ಮಾಡಿ ಗಮನ ಸೆಳೆದಿದ್ದರು. ಈಗ ಕಿರಣ್ ರಾಜ್ ಅವರು ‘ಕರ್ಣ’ ಹೆಸರಿನ ಧಾರಾವಾಹಿ ಮಾಡುತ್ತಾ ಇದ್ದಾರೆ. ಈ ಧಾರಾವಾಹಿಗೆ ನಾಯಕಿ ಯಾರು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿ ಭವ್ಯಾ ಗೌಡಗೆ ನಾಯಕಿ ಅವಕಾಶ ಸಿಕ್ಕಿದೆ.
ಭವ್ಯಾ ಗೌಡ ಅವರು ಕಲರ್ಸ್ ಕನ್ನಡದಲ್ಲಿ ಈ ಮೊದಲು ‘ಗೀತಾ’ ಧಾರಾವಾಹಿ ಮಾಡಿದ್ದರು. ಈ ಧಾರಾವಾಹಿ ಯಶಸ್ವಿ ಆದ ಬಳಿಕ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಅವಕಾಶ ಸಿಕ್ಕಿತು. ಅವರು ‘ಬಾಯ್ಸ್ vs ಗರ್ಲ್ಸ್’ ಶೋನಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಅವರು ಇಲ್ಲಿಗೆ ಹೋಗಲಿಲ್ಲ.
‘ಕರ್ಣ’ ಧಾರಾವಾಹಿಗೆ ಭವ್ಯಾ ಗೌಡ ನಾಯಕಿ ಆಗಿ ಕಿರಣ್ ರಾಜ್ ಜೊತೆ ಅವರು ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ಧಾರಾವಾಹಿಯ ರಿಲೀಸ್ ದಿನಾಂಕ ಇನ್ನಷ್ಟೇ ರಿವೀಲ್ ಆಗಬೇಕಿದೆ. ಜೀ ಕನ್ನಡದಲ್ಲಿ ಧಾರಾವಾಹಿ ಪ್ರಸಾರ ಕಾಣಲಿದೆ.
—

Be the first to comment