ಎಆರ್ ವಿಖ್ಯಾತ್ ನಿರ್ದೇಶನದ ‘Yours Sincerely ರಾಮ್’ ಚಿತ್ರಕ್ಕೆ ಇಬ್ಬರು ನಾಯಕಿಯರ ಪೈಕಿ ಒಂದು ಪಾತ್ರಕ್ಕೆ ಭಾವನಾ ಅವರನ್ನು ಆಯ್ಕೆ ಮಾಡಲಾಗಿದೆ.
ಚಿತ್ರತಂಡದೊಂದಿಗೆ ನಡೆದ ಚರ್ಚೆಯ ನಂತರ ಭಾವನಾ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.
ಈ ಹಿಂದೆ ಚಿತ್ರತಂಡ ಮೀರಾ ಜಾಸ್ಮಿನ್ ಅವರ ಪಾತ್ರದ ಬಗ್ಗೆ ಆರಂಭಿಕ ಚರ್ಚೆಗಳನ್ನು ನಡೆಸಿದೆ. ಅವರನ್ನು ಕನ್ನಡ ಚಿತ್ರರಂಗಕ್ಕೆ ಮರಳಿ ಕರೆತರುವ ಕೆಲಸ ಮಾಡುತ್ತಿದೆ ಎಂದು ವರದಿಯಾಗಿತ್ತು.
ಭಾವನಾ, ಪುನೀತ್ ರಾಜ್‌ಕುಮಾರ್ ಅಭಿನಯದ ಜಾಕಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಗಣೇಶ್ ಅವರೊಂದಿಗೆ ರೋಮಿಯೋ ಚಿತ್ರದಲ್ಲಿ ತೆರೆ ಹಂಚಿಕೊಂಡರು. ಇದಲ್ಲದೆ ಉಪೇಂದ್ರ ಅವರೊಂದಿಗೂ ನಟಿಸಿದ್ದಾರೆ. ವಿಖ್ಯಾತ್ ನಿರ್ಮಾಣದ ಇನ್ಸ್‌ಪೆಕ್ಟರ್ ವಿಕ್ರಮ್ ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಜೊತೆಗೆ ನಟಿಸಿದ್ದಾರೆ. ಭಾವನಾ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ.
ಚಿತ್ರತಂಡ ಈಗಾಗಲೇ ರಮೇಶ್ ಅರವಿಂದ್ ಮತ್ತು ಗಣೇಶ್ ಅವರನ್ನು ಒಳಗೊಂಡ ಕೆಲವು ಪ್ರಮುಖ ಭಾಗಗಳ ಚಿತ್ರೀಕರಣವನ್ನು ಮುಗಿಸಿದೆ. ಮುಂದಿನ ಭಾಗದ ಚಿತ್ರೀಕರಣಕ್ಕೆ ತಂಡವು ಸಜ್ಜಾಗುತ್ತಿದೆ. ಚಿತ್ರವು 1990ರ ದಶಕದ ಭಾವನಾತ್ಮಕ ತಿರುಳನ್ನು ಒಳಗೊಂಡಿದೆ.
ರಾಯಲ ಸ್ಟುಡಿಯೋಸ್ ಅಡಿಯಲ್ಲಿ ಸತ್ಯ ರಾಯಲ ನಿರ್ಮಿಸಿರುವ ಈ ಚಿತ್ರಕ್ಕೆ ನವೀನ್ ಕುಮಾರ್ ಅವರ ಛಾಯಾಗ್ರಹಣ, ಜೆ ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಇದೆ.
—–

Be the first to comment